More

    ಹದಗೆಡಲಿದೆ ಹಳ್ಳಿಗಳ ಸ್ಥಿತಿ: ಕೋಡಿ ಮಠ ಶ್ರೀ ಭವಿಷ್ಯ

    ಹಾಸನ: ಕರೊನಾ ಹಾವಳಿ ಇನ್ನೂ ಮುಂದುವರಿಯಲಿದ್ದು, ಹಳ್ಳಿಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆಶ್ವಿಜ ಹಾಗೂ ಕಾರ್ತಿಕ ಮಾಸದಲ್ಲಿ ಕರೊನಾ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ.

    ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ನೀಡದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುತ್ತದೆ ಎಂದು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಧರ್ವಚರಣೆಗಳು ರೋಗ ರುಜಿನಗಳನ್ನು ತಡೆಗಟ್ಟುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಮಾನವ ಆಧುನಿಕತೆ ಹೆಸರಿನಲ್ಲಿ ಎಲ್ಲವನ್ನೂ ಮರೆತಿದ್ದಾನೆ. ಕರೊನಾ ಹಿಂದಿನ ದಿನಗಳಲ್ಲಿ ಗಂಟಲು ಬೇನೆಯಾಗಿ ಕಾಣಿಸಿಕೊಂಡಿತ್ತು. ಈಗ ಹೆಸರು ಬದಲಿಸಿಕೊಂಡು ಬೇರೆ ಅವತಾರದಲ್ಲಿ ಪ್ರತ್ಯಕ್ಷವಾಗಿದೆ ಎಂದು ಅಭಿಪ್ರಾಯಪಟ್ಟರು.

    ಸರ್ಕಾರದ ನಿರ್ಲಕ್ಷ್ಯೇ ಕಾರಣ: ಕರೊನಾ ನಿಯಂತ್ರಣ ಮೀರಿ ಹರಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯೇ ಕಾರಣ. ಇನ್ನೂ ಒಂದು ತಿಂಗಳು ಲಾಕ್​ಡೌನ್ ಮಾಡಿದ್ದಿದ್ದರೆ ಇಷ್ಟು ಹರಡುತ್ತಿರಲಿಲ್ಲ. ಆರ್ಥಿಕ ದೃಷ್ಟಿಯಿಂದ ಮದ್ಯದಂಗಡಿ ತೆರೆಸಿದ ಸರ್ಕಾರ, ದೇವಸ್ಥಾನಗಳನ್ನು ಮುಚ್ಚಿಸಿತು. ಹೀಗಾಗಿ ದೇವರ ಅವಕೃಪೆಗೆ ಕಾರಣವಾಗಬೇಕಾಯಿತು. ಪರಸ್ಪರ ಅಂತರ ಪಾಲನೆ, ಸ್ವಚ್ಛತೆ ಕಾಪಾಡಿಕೊಂಡರೆ ಯಾವುದೇ ಔಷಧ ಇಲ್ಲದೆ ಕರೊನಾದಿಂದ ಮುಕ್ತಿ ಕಾಣಬಹುದು. ಪ್ರಕೃತಿ ಮೇಲಿನ ದಬ್ಬಾಳಿಕೆ ನಿಂತರೆ ಸಮಸ್ಯೆಗೆ ಇತಿಶ್ರೀ ಹಾಡಬಹುದು ಎಂದರು.

    ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts