ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ

ಅಹಮದಾಬಾದ್​: ಕೊವಿಡ್​-19ರೋಗಿಗಳಿಗೆ ನೀಡಲಾಗುವ ಚುಚ್ಚುಮದ್ದನ್ನು ಅಕ್ರಮವಾಗಿ ವಿತರಿಸುತ್ತಿದ್ದ ಐವರನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ. ಗಂಭೀರಸ್ಥಿತಿಯಲ್ಲಿರುವ ಕೊವಿಡ್​-19 ರೋಗಿಗಳಿಗೆ ನೀಡಲಾಗುವ ಟೋಸಿಲಿಜುಮಾವನ್ನು ನಕಲಿಯಾಗಿ ತಯಾರಿಸಿ, ಮಾರಾಟ ಮಾಡುವ ದಂಧೆಯಲ್ಲಿ ಇವರು ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಐವರು ಸೇರಿಕೊಂಡು ಸೂರತ್​ನಲ್ಲಿ ನಕಲಿ ಔಷಧ ತಯಾರಿಕಾ ಕಂಪನಿಯನ್ನು ಪ್ರಾರಂಭಿಸಿದ್ದರು. ಈ ಫಾರ್ಮಾ ಕಂಪನಿ ಮೇಲೆ ಆಹಾರ ಮತ್ತು ಔಷಧಿ ನಿಯಂತ್ರಣಾ ಆಡಳಿತಾಧಿಕಾರಿಗಳು ದಾಳಿ ಮಾಡಿದಾಗ ಸತ್ಯ ಹೊರಬಿದ್ದಿತ್ತು. ಆರೋಪಿಗಳನ್ನು ಆಶೀಶ್​ ಶಾ, ಅಕ್ಷಯ್​ ಶಾ, ಹರ್ಷ ಠಾಕೂರ್​, ನೀಲೇಶ್​ … Continue reading ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ