ಬಂದು ಶರಣಾಗು..ಇಲ್ಲದಿದ್ದರೆ ನಿನ್ನನ್ನೂ ಪೊಲೀಸರು ಕೊಲ್ಲುತ್ತಾರೆ: 2ನೇ ಮಗನಿಗೆ ಮನವಿ ಮಾಡಿದ ಸರಳಾದೇವಿ

Sarala Devi
Published on

ಲಖನೌ: ಅಂದು ಕಾನ್ಪುರದಲ್ಲಿ ಎಂಟು ಪೊಲೀಸ್​ರನ್ನು ವಿಕಾಸ್​ ದುಬೆ ಹತ್ಯೆ ಮಾಡಿದಾಗ, ಆತನ ತಾಯಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.

ನನ್ನ ಮಗ ಮಾಡಿದ್ದು ಅಪರಾಧ. ಒಂದೊಮ್ಮೆ ಅವನು ಶರಣಾಗದೆ ಇದ್ದರೆ ಕೊಂದುಬಿಡಿ ಎಂದು ಪೊಲೀಸರಿಗೆ ಹೇಳಿದ್ದರು.

ಇದೀಗ ಅವರ ಎರಡನೇ ಮಗ, ವಿಕಾಸ್​ ದುಬೆ ಸೋದರ ದೀಪ್​ ಪ್ರಕಾಶ್​ ದುಬೆ ತಲೆ ಮರೆಸಿಕೊಂಡಿದ್ದಾನೆ. ತನ್ನ ಅಣ್ಣನ ಅಕ್ರಮಗಳಲ್ಲಿ ಆತನ ಪಾಲೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ದೀಪ್​ ಪ್ರಕಾಶ್​ ದುಬೆ ತಲೆಗೆ ಉತ್ತರ ಪ್ರದೇಶ ಸರ್ಕಾರ 20 ಸಾವಿರ ರೂ.ಘೋಷಿಸಿದೆ.

ಇದೀಗ ಮತ್ತೆ ತಾಯಿ ಸರಳಾ ದೇವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಿರಿಯ ಮಗನ ಬಳಿ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: PHOTOS: ನಟ ಜೈ ಜಗದೀಶ್​ ಪುತ್ರಿ ವೈಭವಿ ಮಾದಕ ಫೋಟೋಶೂಟ್​

ದೀಪ್ ಪ್ರಕಾಶ್​ ದುಬೆ ಶರಣಾಗದಿದ್ದರೆ ವಿಕಾಸ್​ ದುಬೆಗೆ ಎದುರಾದ ಪರಿಸ್ಥಿತಿಯೇ ಅವನಿಗೂ ಬರುತ್ತದೆ. ಹಾಗಾಗಿ ಎಲ್ಲಿದ್ದರೂ ಬಂದು ಶರಣಾಗು ಎಂದು ಹೇಳಿದ್ದಾರೆ.

ದೀಪ್​ ಪ್ರಕಾಶ್​ ದಯವಿಟ್ಟು ಬಂದು ಶರಣಾಗು. ಇಲ್ಲದಿದ್ದರೆ ಪೊಲೀಸರು ನಿನ್ನ ಮತ್ತು ನಿನ್ನ ಕುಟುಂಬವನ್ನು ಕೊಲ್ಲುತ್ತಾರೆ. ಶರಣಾದರೆ ಪೊಲೀಸರು ರಕ್ಷಣೆ ಕೊಡುತ್ತಾರೆ. ನೀನೇನೂ ಮಾಡಿಲ್ಲ ಎನ್ನುವುದು ನನಗೆ ಗೊತ್ತು. ವಿಕಾಸ್​ ದುಬೆಯ ತಮ್ಮ ಎಂಬ ಒಂದೇ ಕಾರಣಕ್ಕೆ ನೀನು ಅಡಗಿದ್ದೀಯಾ ಎಂಬುದು ನನಗೆ ತಿಳಿದಿದೆ ಎಂದು ಸರಳಾದೇವಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net