ಜಿಲ್ಲೆ

ಕರ್ನಾಟಕ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರಿ ಆದೇಶ

Webdesk - Ravikanth

ಕೊಡಗು: ಇತ್ತೀಚೆಗೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದ ಸರ್ಕಾರ, ಇದೀಗ ಕರ್ನಾಟಕ ಕೊಡವ ಅಭಿವೃದ್ಧಿ ನಿಗಮವನ್ನೂ ಸ್ಥಾಪನೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡವ ಸಮುದಾಯಕ್ಕೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವುದಾಗಿ ಕೊಡಗಿನಲ್ಲಿ ಮಾ.18ರಂದು ನಡೆದಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಭರವಸೆ ನೀಡಿದ್ದ ಬಸವರಾಜ ಬೊಮ್ಮಾಯಿ, ಅದರಂತೆಯೇ ನಡೆದುಕೊಂಡಿದ್ದು, ಇಂದು ಸರ್ಕಾರದಿಂದ ಆದೇಶವನ್ನು ಕೂಡ ಹೊರಡಿಸಿದ್ದಾರೆ.

ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಬೇಕು ಎಂಬುದಾಗಿ ಶಾಸಕ ಕೆ.ಜಿ.ಬೋಪಯ್ಯ ಅವರು ಬೇಡಿಕೆ ಇಟ್ಟಿದ್ದರು. ಅವರು ಯುಕೋ ಸಂಘಟನೆಯ ಮೂಲಕ ಮನವಿ ಮಾಡಿದ್ದರು. ಆ ಮೇರೆಗೆ ಇಂದು ನಿಗಮ ಸ್ಥಾಪನೆಯ ಅಧಿಕೃತ ಆದೇಶ ಹೊರಬಿದ್ದಿದೆ. ಕೊಡವರ ಮನವಿಗೆ ಸ್ಪಂದಿಸಿ ನಿಗಮ ಸ್ಥಾಪನೆ ಮಾಡಿದ್ದಕ್ಕಾಗಿ ಜಿಲ್ಲೆಯ ಜನತೆಯ ಪರವಾಗಿ ಮುಖ್ಯಮಂತ್ರಿಯವರಿಗೆ ಕೆ.ಜಿ. ಬೋಪಯ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.