ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಹೆರ್ಗ ವಿಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಕುಚ್ಚೂರು ಸಹಯೋಗದೊಂದಿಗೆ ಕನ್ನಡ ತೇರು ಕಾರ್ಯಕ್ರಮ -2 ನಡೆಯಿತು 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಭಾಷೆ, ಸಂಸ್ಕೃತಿ ಅರಿವು

ಇಂದಿರಾ ಎನ್ ಕೆ

ಹೆಬ್ರಿ: ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿವಿನ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು. ಕನ್ನಡ ಉಳಿಸಿ ಬೆಳೆಸುವ ಕೆಲಸ ನಮ್ಮಿಂದ ಆಗಬೇಕು ಎಂದು ಕಸಾಪ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಹೇಳಿದರು.

ಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಹೆರ್ಗ ವಿಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಕುಚ್ಚೂರು ಸಹಯೋಗದೊಂದಿಗೆ ಶನಿವಾರ ಕನ್ನಡ ತೇರು ಕಾರ್ಯಕ್ರಮ -2 ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಹೆಬ್ರಿ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಉದ್ಘಾಟಿಸಿದರು. ಕುಚ್ಚೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ ವಿಶ್ವನಾಥ ನಾಯ್ಕ, ಮುಖ್ಯ ಶಿಕ್ಷಕಿ ತುಳಸಿ, ಕಸಾಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ ಕುಮಾರ್ ಎಸ್., ಕವಿ ಮುದ್ದಣ ಸಾಹಿತ್ಯ ಸಂಘ ಅಧ್ಯಕ್ಷೆ ತನ್ವಿ ಡಿ.ಶೆಟ್ಟಿ, ಹಿರಿಯರಾದ ಮ.ಮಾ ಹೆಬ್ಬಾರ್, ಬಾಲಚಂದ್ರ ಮುದ್ರಾಡಿ, ಪದಾಧಿಕಾರಿಗಳಾದ ಬಾಲಚಂದ್ರ ಹೆಬ್ಬಾರ್, ಪವಿತ್ರಾ ಬೆಳ್ವೆ, ಪಲ್ಲವಿ ಬೆಳ್ವೆ ಉಪಸ್ಥಿತರಿದ್ದರು. ಕಸಾಪ ಹೆಬ್ರಿ ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ತುಳಸಿ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ರೇವತಿ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ಶೆಟ್ಟಿ ವಂದಿಸಿದರು.

ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಮೃದ್ಧವಾಗಿದೆ. ಬೇರೆ ಭಾಷೆಗಳನ್ನು ದೂಷಿಸದೆ ಕನ್ನಡವನ್ನು ಅಭಿಮಾನದಿಂದ ಹೆಚ್ಚು ಹೆಚ್ಚು ಬಳಸಿದರೆ ಕನ್ನಡ ಭಾಷೆಗೆ ಯಾವುದೇ ತೊಂದರೆ ಇಲ್ಲ. ತಾಯಿ ಭಾಷೆ ಕನ್ನಡ. ತಾಯಿಯನ್ನು ಮರೆಯಬಾರದು.-ಬಿ.ಕರುಣಾಕರ ಶೆಟ್ಟಿ ಹೆಬ್ರಿ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ