ಕೋಟ: ಕಾರ್ಕಡ ಗೆಳೆಯರ ಬಳಗದ 37ನೇ ವಾರ್ಷಿಕ ಮಹಾಸಭೆ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಬಳಗದ ಕಾರ್ಯದರ್ಶಿ ಕೆ.ಶೀನ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೆ.ನಾಗರಾಜ ಉಪಾಧ್ಯ 2024-2025ನೇ ಸಾಲಿನ ಆಯ ವ್ಯಯ ಮಂಡಿಸಿದರು.
ಕೆ.ತಾರಾನಾಥ ಹೊಳ್ಳ ಬಳಗದ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಕೆ.ಶಶಿಧರ ಮಯ್ಯ-ಉಪಾಧ್ಯಕ್ಷ, ಕೆ.ನಾಗರಾಜ ಉಪಾಧ್ಯ-ಕಾರ್ಯದರ್ಶಿ, ಕೆ.ಜಗದೀಶ ಆಚಾರ್ಯ-ಜತೆ ಕಾರ್ಯದರ್ಶಿ, ಕೆ.ಶೀನ-ಖಜಾಂಚಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಚಂದ್ರಕಾಂತ ನಾಯರಿ, ಕೆ.ಶ್ರೀಕಾಂತ ಐತಾಳ, ಕೆ.ಶ್ರೀಪತಿ ಆಚಾರ್ಯ, ಕೆ.ತಮ್ಮಯ್ಯ, ಕೆ.ಉದಯ ಐತಾಳ, ಕೆ.ರಾಘವೇಂದ್ರ ದೇವಾಡಿಗ, ಕೆ.ಶೇಖರ, ಕೆ.ರಘ ಭಂಡಾರಿ ಅವರನ್ನು ಆಯ್ಕೆ ಮಾಡಲಾಯಿತು.