ಜಿಲ್ಲೆ

ಲಯನ್ಸ್ ಕ್ಲಬ್‌ನಿಂದ ಪತ್ರಕರ್ತರಿಗೆ ಸನ್ಮಾನ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ವತಿಯಿಂದ ಪತ್ರಕರ್ತರಾದ ಅನಂತ ನಾಯಕ್ ಮುದ್ದೂರು ಮತ್ತು ಪ್ರವೀಣ್ ಮುದ್ದೂರು ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಗವರ್ನರ್ ಲ.ಮಹಮ್ಮದ್ ಹನೀಫ್ ಸನ್ಮಾನ ನೆರವೇರಿಸಿದರು.

ಲಯನ್ಸ್ ಜಿಲ್ಲೆ 317ಸಿಯ ರಾಜೀವ್ ಕೋಟ್ಯಾನ್, ಕ್ಯಾಬಿನೆಟ್ ಕೋಶಾಧಿಕಾರಿ ಶ್ರೀನಿವಾಸ ಪೈ, ಹರಿಪ್ರಸಾದ ರೈ, ಶೇಖರ್ ಶೆಟ್ಟಿ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ನಾಯಕ್, ಐವಾನ್ ಡೋನಾತ್ ಸುವಾರಿಸ್, ಯು.ಸಂತೋಷ್ ಕೋಟ್ಯಾನ್, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ರೇವತಿ, ಆನಂದ ಮಟಪಾಡಿ, ಲಕ್ಷ್ಮೀ ಎಸ್.ರಾವ್, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.