ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟರ‌್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲೆಯ ಇಂಟರ‌್ಯಾಕ್ಟ್ ಉಪಸಭಾತಿ ಮಂಜುನಾಥ ಕಾಂಚನ್, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ ಅನಿಲ್ ಸುವರ್ಣ, ಟೀಚರ್ ಇಂಟರ‌್ಯಾಕ್ಟ್ ಕೋ ಆರ್ಡಿನೇಟರ್ ಹೆರಿಯ ಮಾಸ್ಟರ್ ಮತ್ತಿತರರು ಇದ್ದರು.  
ಜಿಲ್ಲೆ

ವ್ಯಕ್ತಿತ್ವ ಬೆಳೆಸಲು ಇಂಟರ‌್ಯಾಕ್ಟ್ ಕ್ಲಬ್ ಸಹಕಾರಿ : ಮಂಜುನಾಥ ಕಾಂಚನ್ ಹೇಳಿಕೆ

ಇಂದಿರಾ ಎನ್ ಕೆ

ಕೋಟ: ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದೆ. ಮಕ್ಕಳಲ್ಲಿ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸುವಲ್ಲಿ ಇಂಟರ‌್ಯಾಕ್ಟ್ ಕ್ಲಬ್ ಪಾತ್ರ ಹಿರಿದು ಎಂದು ರೋಟರಿ ಜಿಲ್ಲೆಯ ಇಂಟರ‌್ಯಾಕ್ಟ್ ಉಪಸಭಾತಿ ಮಂಜುನಾಥ ಕಾಂಚನ್ ಹೇಳಿದರು.

ರೋಟರಿ ಕ್ಲಬ್ ಕೋಟ ಸಿಟಿ ಸಹಭಾಗಿತ್ವದಲ್ಲಿ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟರ‌್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷೆ ಅನುಶ್ರೀ, ಕಾರ್ಯದರ್ಶಿ ಪೂರ್ವಿ ಅವರಿಗೆ ಪದವಿ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ ಅನಿಲ್ ಸುವರ್ಣ, ವಲಯ ಸೇನಾನಿ ನಿತ್ಯಾನಂದ ನಾಯರಿ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಇಂಟರ‌್ಯಾಕ್ಟ್ ಕ್ಲಬ್ ಸಭಾಪತಿ ಉಮೇಶ್ ನಾಯರಿ, ಮಾಜಿ ಅಧ್ಯಕ್ಷ ಡಾ.ಗಣೇಶ್ ಯು., ನಿಯೋಜಿತ ಅಧ್ಯಕ್ಷ ಪ್ರಕಾಶ್ ಹಂದಟ್ಟು ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕಿ ಸುವರ್ಣ ಜಿ.ನಾವಡ ಸ್ವಾಗತಿಸಿದರು. ಶಾಲೆ ಇಂಟರ‌್ಯಾಕ್ಟ್ ಕೋ ಆರ್ಡಿನೇಟರ್ ಹೆರಿಯ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವಿ ಇಂಟರ‌್ಯಾಕ್ಟ್ ಕಾರ್ಯದರ್ಶಿ ವಂದಿಸಿದರು. ಶಿಕ್ಷಕ ರಾಜೀವ ಕಾರ್ಯಕ್ರಮ ನಿರ್ವಹಿಸಿದರು.