ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲಿಗ್ರಾಮ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವಸ್ಥಾನಗಳ ನಡುವಿನ ಹೆದ್ದಾರಿ ಜಂಕ್ಷನ್‌ಗೆ ಸಂಬಂಧಿಸಿದ ತಾಂತ್ರಿಕ ಪರಿಣಿತರೊಂದಿಗೆ ದೇವಳದ ಕಚೇರಿಯಲ್ಲಿ ಚರ್ಚೆ ನಡೆಸಿದರು.  
ಜಿಲ್ಲೆ

ಸಂಸದರಿಂದ ಸಾಲಿಗ್ರಾಮ ದೇಗುಲದ ಹೆದ್ದಾರಿ ಜಂಕ್ಷನ್ ಪರಿಶೀಲನೆ

ಇಂದಿರಾ ಎನ್ ಕೆ

ಕೋಟ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲಿಗ್ರಾಮ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವಸ್ಥಾನಗಳ ನಡುವಿನ ಹೆದ್ದಾರಿ ಜಂಕ್ಷನ್ ಸಂಬಂಧಿಸಿದ ತಾಂತ್ರಿಕ ಪರಿಣಿತರೊಂದಿಗೆ ದೇವಳದ ಕಚೇರಿಯಲ್ಲಿ ಚರ್ಚೆ ನಡೆಸಿದರು. ನಂತರ ಜಂಕ್ಷನ್‌ಗೆ ತೆರಳಿದ ಸಂಸದರು ಉಭಯ ದೇವಳಗಳ ನಡುವೆ ಪಾದಚಾರಿ ಮಾರ್ಗ ನಿರ್ಮಿಸಿದರೆ ಆಗುವ ಸಾಧಕ ಬಾಧಕಗಳನ್ನು ಸ್ವತಃ ಆಸಕ್ತಿಯಿಂದ ವಿಮರ್ಶಿಸಿದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಉಡುಪಿ ಅಂಗ ಸಂಸ್ಥೆಯ ಕಾರ್ಯದರ್ಶಿ ಡಾ.ರಾಘವೇಂದ್ರ ಹೊಳ್ಳ ದೂರವಾಣಿ ಸಂಭಾಷಣೆ ಮೂಲಕ ಇದುವರೆಗೆ ರಾಷ್ಟ್ರೀಯ ಹೆದ್ದಾರಿಯ ಸಕ್ಷಮ ಪ್ರಾಧಿಕಾರದೊಂದಿಗೆ ವ್ಯವಹರಿಸಿದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಸದರಿಗೆ ನೀಡಿದರು.

ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆ ಅಧ್ಯಕ್ಷ ಸತೀಶ ಹಂದೆ ಮತ್ತು ಕಾರ್ಯದರ್ಶಿ ಸುರೇಶ ತುಂಗ, ದೇಗುಲದ ಆಡಳಿತ ಮಂಡಳಿಯ ವತಿಯಿಂದ ಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಸಾಲಿಗ್ರಾಮ ಪಪಂ ಸದಸ್ಯ ಸಂಜೀವ ದೇವಾಡಿಗ ಇದ್ದರು.