ಕರಕುಶಲ ವಸ್ತು ಪ್ರಾತ್ಯಕ್ಷಿಕೆ, ಮಾಹಿತಿ ಶಿಬಿರವನ್ನು ಯಕ್ಷಗಾನ ಕಲಾವಿದ ಮಾರಾಳಿ ಪ್ರಭಾಕರ ಶೆಟ್ಟಿ ಉದ್ಘಾಟಿಸಿದರು.  
ಜಿಲ್ಲೆ

ಬ್ರಹ್ಮಾವರದಲ್ಲಿ ಮಾಹಿತಿ ಶಿಬಿರ

ಇಂದಿರಾ ಎನ್ ಕೆ

ಬ್ರಹ್ಮಾವರ: ಆಧುನಿಕ ಶಿಕ್ಷಣಕ್ಕೆ ನೂತನ ಆವಿಷ್ಕಾರ, ಕೌಶಲವನ್ನು ಅಭಿವೃದ್ಧಿ ಸಂಸ್ಥೆ ನೀಡುತ್ತಿದೆ ಎಂದು ಯಕ್ಷಗಾನ ಕಲಾವಿದ ಮಾರಾಳಿ ಪ್ರಭಾಕರ ಶೆಟ್ಟಿ ಹೇಳಿದರು.

ಕರ್ಜೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಬ್ರಹ್ಮಾವರ 19ನೇ ಕರ್ಜೆ ಗ್ರಾಪಂ ರೋಟರಿ ರಾಯಲ್ ಸಹಭಾಗಿತ್ವದಲ್ಲಿ ಮಕ್ಕಳಿಗೆ ಒಂದು ದಿನದ ಕರಕುಶಲ ವಸ್ತು ಪ್ರಾತ್ಯಕ್ಷಿಕೆ, ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹೇರಾಡಿ ಅತುಲ ಯುವಕ ಸಂಘ ಅಧ್ಯಕ್ಷ ಉದಯಕುಮಾರ್ ಬ್ರಹ್ಮಾವರ, ಬ್ರಹ್ಮಾವರ ರೋಟರಿ ರೋಯಲ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಜಯರಾಮ್ ಶೆಟ್ಟಿ, ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಘು ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲಕ್ಷಾಧಿನಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಮೇಶ್ ವಕ್ವಾಡಿ ಸ್ವಾಗತಿಸಿದರು. ಅನಿಶಾ ಪೇತ್ರಿ ಕಾರ್ಯಕ್ರಮ ನಿರೂಪಿಸಿದರು.