ಕೋಟ: ಬ್ಲಾಕ್ ಕಾಂಗ್ರೆಸ್ ಕೋಟ ಇಂದಿರಾ ಭವನ ಕಚೇರಿಯಲ್ಲಿ ದಿ.ಇಂದಿರಾ ಗಾಂಧಿ ಪುಣ್ಯತಿಥಿ ಆಚರಿಸಲಾಯಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್, ಕಾಂಗ್ರೆಸ್ ಮುಖಂಡ ಗೋಪಾಲ ಬಂಗೇರ, ಪಾಂಡೇಶ್ವರ ಗ್ರಾಪಂ ಸದಸ್ಯ ಚಂದ್ರಮೋಹನ್ ಪೂಜಾರಿ ಪಾಂಡೇಶ್ವರ, ಪಟ್ಟಣ ಪಂಚಾಯಿತಿ ಸಾಲಿಗ್ರಾಮದ ಪ್ರತಿ ಪಕ್ಷ ನಾಯಕ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ರವಿ ಕಾಮತ್ ಗುಂಡ್ಮಿ, ಹಿರಿಯ ಕಾಂಗ್ರೆಸ್ ನಾಯಕರಾದ ಬಸವ ಪೂಜಾರಿ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಕೋಟ ಹಿಂದುಳಿದ ಘಟಕ ಅಧ್ಯಕ್ಷ ದಿನೇಶ್ ಬಂಗೇರ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮಹಾಬಲ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಕೋಟ ಸಾಮಾಜಿಕ ಜಾಲತಾಣ ಅಧ್ಯಕ್ಷ ಶ್ರೀಕಾಂತ್ ಆಚಾರ್ ಪಾಂಡೇಶ್ವರ, ರತ್ನಾಕರ್ ಶ್ರೀಯಾನ್ ಕೋಟ ಪಡುಕೆರೆ, ರವಿಕುಮಾರ್, ರಾಜು ಪೂಜಾರಿ ತೊಡ್ಕಟ್ಟು, ಶಂಕರ್ ಪೂಜಾರಿ ಪಾರಂಪಳ್ಳಿ, ರತ್ನಾಕರ ಪೂಜಾರಿ ಪಾರಂಪಳ್ಳಿ, ಯಾಶಿನ್ ಪಾರಂಪಳ್ಳಿ, ಸಚಿನ್ ಶೆಟ್ಟಿ ವಡ್ಡರ್ಸೆ ಉಪಸ್ಥಿತರಿದ್ದರು. ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ.ನೆಲ್ಲಿಬೆಟ್ಟು ಸ್ವಾಗತಿಸಿದರು.