ರೈತರ ಅತಂತ್ರಗೊಳಿಸಿದ ರಾಜ್ಯ ಸರ್ಕಾರ

protest
ಬಿಜೆಪಿ ಕುಂದಾಪುರ ಮಂಡಲ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ರಾಜ್ಯ ಸರ್ಕಾರ ಒಂದೇ ಧರ್ಮದ ಪರವಾಗಿ ಕಾರ್ಯಾಚರಿಸುತ್ತಿದೆ. ರೈತರ ಭೂಮಿ, ಮಠ ಮಂದಿರಗಳ ಭೂಮಿ ವಿರುದ್ಧ ವಕ್ಫ್ ಭೂಮಿ ಎಂದು ನೋಟಿಸ್ ನೀಡಿ ಕಾಂಗ್ರೆಸ್ ಸರ್ಕಾರ ರೈತರನ್ನು ಅತಂತ್ರರನ್ನಾಗಿಸಿದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ರಾಜ್ಯ ಸರ್ಕಾರದ ವಕ್ಫ್ ನಿರ್ಣಯ ಖಂಡಿಸಿ ಬಿಜೆಪಿ ಕುಂದಾಪುರ ಮಂಡಲ ನೇತೃತ್ವದಲ್ಲಿ ಕುಂದಾಪುರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯದ ಜನತೆ ತಮ್ಮ ಭೂಮಿಯ ದಸ್ತಾವೇಜನ್ನು ಪರಿಶೀಲಿಸಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಸಿದರು.

ಮಂಡಲ ಮಾಜಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಮಾತನಾಡಿದರು. ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಪ್ರಸ್ತಾವನೆಗೈದರು. ಪ್ರಮುಖರಾದ ಸುಧೀರ್ ಕೆ.ಎಸ್., ಸತೀಶ್ ಪೂಜಾರಿ ವಕ್ವಾಡಿ, ಮೋಹನದಾಸ ಶೆಣೈ, ವನಿತಾ ಬಿಲ್ಲವ, ಪುರಸಭೆ ಸದಸ್ಯರು, ಬಿಜೆಪಿ ಕುಂದಾಪುರ ಮಂಡಲದ ಪದಾಧಿಕಾರಿಗಳು, ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ತುಷ್ಟೀಕರಣಕ್ಕಾಗಿ ರೈತರ, ಭೂಮಾಲೀಕರ, ದೇವಾಲಯಗಳ, ಮಠ ಮಂದಿರಗಳ ಭೂಮಿಯನ್ನು ವಕ್ಫ್ ಭೂಮಿ ಎಂದು ಪಹಣಿಯಲ್ಲಿ ನಮೂದಿಸಿ ನೋಟಿಸ್ ನೀಡಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎಂಬುದಕ್ಕೆ ನಿದರ್ಶನ. -ಬೈಕಾಡಿ ಸುಪ್ರಸಾದ ಶೆಟ್ಟಿ, ಬಿಜೆಪಿ ಮುಖಂಡ https://www.vijayavani.net/congress-ruling-with-waqf-cooperation https://www.vijayavani.net/electric-pole-climbing-training

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net