ವಕ್ಫ್ ಸಹಕಾರದೊಂದಿಗೆ ಕಾಂಗ್ರೆಸ್ ಆಡಳಿತ

prathibhatane
ಹೆಬ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಹಸೀಲ್ದಾರ್‌ಗೆ ಬಿಜೆಪಿ ಮುಖಂಡರು ಮನವಿ ನೀಡಿದರು. ಪ್ರಮುಖರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಲಕ್ಷ್ಮೀನಾರಾಯಣ, ರೇಷ್ಮಾ ಶೆಟ್ಟಿ ಮತ್ತಿತರರಿದ್ದರು.
Published on

ಹೆಬ್ರಿ: ಶಾಂತಿ ಸುವ್ಯವಸ್ಥೆಯಿಂದಿದ್ದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಸಹಾಯದೊಂದಿಗೆ ಆಡಳಿತ ನಡೆಸುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ. ವಕ್ಫ್ ಮಂಡಳಿ ದೇಶಾದ್ಯಂತ ಇರುವ ಸಾರ್ವಜನಿಕ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದೆ ಎಂದು ಬಿಜೆಪಿ ಮುಖಂಡ ಮಟ್ಟಾರ್ ರತ್ನಾಕರ ಹೆಗ್ಡೆ ಆರೋಪಿಸಿದರು.

ಹೆಬ್ರಿಯಲ್ಲಿ ಕಾರ್ಕಳ ಬಿಜೆಪಿ ವತಿಯಿಂದ ರಾಜ್ಯ ವಕ್ಫ್ ಬೋರ್ಡಿನ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ತಹಸೀಲ್ದಾರ್‌ಗೆ ಮನವಿ ನೀಡಿ ಮಾತನಾಡಿದರು. ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಬೇಕು. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಹೆಬ್ರಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಪ್ರಮುಖರಾದ ರೇಷ್ಮಾ ಶೆಟ್ಟಿ, ನವೀನ್ ನಾಯಕ್, ಸುರೇಶ್ ಶೆಟ್ಟಿ, ಬೋಳ ಸತೀಶ್, ಚಂದ್ರಶೇಖರ ಶೆಟ್ಟಿ, ರಮೇಶ್ ಪೂಜಾರಿ, ತಾರಾನಾಥ ಬಂಗೇರ, ಗಣೇಶ್ ಜರ್ವತ್ತು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net