ಬಾರಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿಯವರ ಪದಗ್ರಹಣ ಸಮಾರಂಭ ನಡೆಯಿತು 
ಜಿಲ್ಲೆ

ರೋಟರಿಯಿಂದ ಪೋಲಿಯೊ ನಿರ್ಮೂಲನೆ : ಎ.ಎಸ್.ಎನ್. ಹೆಬ್ಬಾರ್

ಬ್ರಹ್ಮಾವರ: ಜಾಗತಿಕ ಮಟ್ಟದಲ್ಲಿ ಮಹಾಮಾರಿ ಪೋಲಿಯೊ ನಿರ್ಮೂಲನೆ ಮಾಡಲು ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಪ್ರಮುಖ ಕಾರಣ ಎಂದು ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಸಂಕಮ್ಮತಾಯಿ ರೆಸಾರ್ಟನಲ್ಲಿ ಭಾನುವಾರ ಬಾರಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಮುಖವಾಣಿ ಭೂತಾಳ ಪಾಂಡ್ಯ ಬಿಡುಗಡೆಗೊಳಿಸಲಾಯಿತು. ಹೊಸ ಸದಸ್ಯರ ಸೇರ್ಪಡೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ರೋಟರಿಯ ಪ್ರಮುಖರನ್ನು ಗೌರವಿಸಲಾಯಿತು. ರಾಘವೇಂದ್ರ ಸಾಮಗ, ಆಲ್ವಿನ್ ಕ್ವಾಡ್ರಸ್ ರಾಜಾರಾಮ್ ಶೆಟ್ಟಿ, ರಾಜಾರಾಮ್ ಐತಾಳ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಸೀತಾರಾಂ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವರದಿ ವಾಚಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.