ಕಾಸರಗೋಡು: ಬಂಟರ ಸಂಘ ಮಧೂರು ಪಂಚಾಯಿತಿ ಸಮಾವೇಶ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ತೆರೆದ ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಮೇ 12ಕ್ಕೆ ಮಧೂರು ಸಮೀಪದ ಪರಕ್ಕಿಲದಲ್ಲಿ ಜರುಗಲಿದೆ.
ಬೆಳಗ್ಗೆ 8ಕ್ಕೆ ಶ್ರೀ ಮಹಾಗಣಪತಿ ಹೋಮ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. 11ಕ್ಕೆ ಉದ್ಘಾಟನಾ ಸಮಾರಂಭ. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸುವರು. ಮಧೂರು ಸಮಿತಿ ಬಂಟರ ಸಂಘ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಹಂಪಿ ವಿವಿ ವಿಶ್ರಾಂತ ಕುಲಸಚಿವ ಡಾ.ಸುಬ್ಬಣ್ಣ ರೈ, ಪತ್ರಕರ್ತ ರಾಜೇಶ್ ರೈ ಚಟ್ಲ, ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದನ ರೈ ಅವರನ್ನು ಸನ್ಮಾನಿಸಲಾಗುವುದು. ಬೆಂಗಳೂರು ಬಂಟರ ಸಂಘದ ಶೈಕ್ಷಣಿಕ ಸಾಂಸ್ಕೃತಿಕ ವಿಭಾಗ ಸಂಚಾಲಕ ಸದಾನಂದ ಸುಲಾಯ, ನಟ, ನಿರ್ದೇಶಕ ಶಿವಧ್ವಜ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘ ಅಧ್ಯಕ್ಷ ವಕೀಲ ಬಿ.ಸುಬ್ಬಯ್ಯ ರೈ, ಮಾಜಿ ಅಧ್ಯಕ್ಷ ವಕೀಲ ಎ.ಸದಾನಂದ ರೈ, ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ವಕೀಲ ಕೆ. ಮಹಾಬಲ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಬಂಟರ ಸಂಘದ ಹಿರಿಯ ಕಾರ್ಯಕರ್ತ ಎಸ್.ಎನ್.ರಾಮ ಶೆಟ್ಟಿ ಅತಿಥಿಗಳಾಗಿರುವರು.
ಬಂಟರ ಸಂಸ್ಕೃತಿ ಸಂಪ್ರದಾಯಗಳ ಕುರಿತು ಡಾ. ವಿದ್ಯಾ ಮೋಹನದಾಸ್ ರೈ ವಿಶೇಷ ಉಪನ್ಯಾಸ ನೀಡುವರು ಕಾಸರಗೋಡು ವಲಯ ಬಂಟರ ಸಂಘ ಅಧ್ಯಕ್ಷ ಸುಬ್ಬಣ್ಣ ಆಳ್ವ ಕಚ್ಚಿಕ್ಕಾಡ್ ಸನ್ಮಾನಿತರನ್ನು ಪರಿಚಯಿಸುವರು.