ಮೈಸೂರು: ಹುಣಸೂರು ನಗರದ ಎಸ್.ಎಸ್. ಸಾಮಿಲ್ನಲ್ಲಿ ಜೂನ್ 22ರಂದು ನಡೆದಿದ್ದ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಪ್ರಾಪ್ತ ವಯಸಿನ ವಯಸ್ಕರ ಸೇರಿದಂತೆ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ಧಾರೆ.
ಬಂಧಿತರನ್ನು ತೌಸಿಫ್(30) ಎಂದು ಗುರುತಿಸಲಾಗಿದ್ದು, ಈಗ ಗಾಂಜಾ ಮಾರಾಟ ಮಾಡುತ್ತಿದ್ದ. ಅಪ್ರಾಪ್ತ ವಯಸ್ಕರನನ್ನು ಮೈಸೂರಿನಲ್ಲಿರುವ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಜೂನ್ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್ನಲ್ಲಿರುವ ಎಸ್.ಎಸ್. ಸಾಮಿಲ್ನ ಕಾವಲುಗಾರರಾದ ವೆಂಕಟೇಶ್ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂನನ್ನು ಹತ್ಯೆ ಮಾಡಿದ್ದರು.
ಹತ್ಯೆ ಬಳಿಕ ಮೃತರ ಜೇಬಿನಲ್ಲಿ ಸಿಕ್ಕ 488 ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅಭಿಷೇಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಬಂಧಿತ ಆರೋಪಿ ಅಭಿಷೇಕ್ ನೀಡಿದ ಸುಳಿವಿನ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.