ಜಿಲ್ಲೆ

ಬಿ.ಸಿ.ರೋಡಿನಲ್ಲಿ ಮಾನವ ಸರಪಳಿ ರಚನೆ

Avinash R

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಫರಂಗಿಪೇಟೆಯಿಂದ ಮಿತ್ತೂರು, ಕಬಕದ ವರೆಗೆ ಮಾನವ ಸರಪಳಿ ರೂಪಿಸಲಾಯಿತು.

ಆರಂಭದಲ್ಲಿ ನಾಡಗೀತೆ ಹಾಡಿ, ಬಳಿಕ ಪ್ರಮುಖರು ಸಂದೇಶ ನೀಡಿದ ಬಳಿಕ ಸಂವಿಧಾನದ ಪ್ರಸ್ತಾವನೆ ಓದಲಾಯಿತು. ಬಳಿಕ ಎಲ್ಲರೂ ಪರಸ್ಪರ ಕೈ&ಕೈ ಹಿಡಿದುಕೊಂಡು ಸರಪಳಿಯನ್ನು ರಚಿಸಿದರು.

ಬಿ.ಸಿ.ರೋಡ್​ ಫ್ಲೆಓವರ್​ ಕೆಳಗೆ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಸಂದೇಶ ನೀಡಿ, ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಅದರ ಅರಿವು ಪಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಬುಡಾ ಅಧ್ಯಕ್ಷ ಬೇಬಿ ಕುಂದರ್​ ಹಾಗೂ ಸಾರ್ವಜನಿಕರ ಪರವಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಬಂಟ್ವಾಳ ತಹಸೀಲ್ದಾರ್​ ಡಿ.ಅರ್ಚನಾ ಭಟ್​, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್​ ಕುಮಾರ್​, ಸಮಾಜ ಕಲ್ಯಾಣ ಇಲಾಖಾಧಿಕಾರಿ ಜಯಶ್ರೀ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಥಳಿಯ ಸ್ವಯಂಸೇವಾ ಸಂಟನೆಗಳು, ನಾನಾ ಸಂಟನೆಗಳ ಪ್ರಮುಖರು, ಸರ್ಕಾರಿ ನೌಕರರ ಸಂ, ಸಾರ್ವಜನಿಕ ಸಂಟನೆಗಳು, ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲಿ ನಿರತರ ಸಹಿತ ಹಲವು ಮಂದಿ ಉಪಸ್ಥಿತರಿದ್ದು, ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬ್ಯಾನರ್​, ಫಲಕಗಳನ್ನು ಪ್ರದರ್ಶಿಸಲಾಯಿತು.