ಜಿಲ್ಲೆ

ಕಂಬಳಕ್ಕೆ ಮಲ್ಲಿಕಾ ಶೆಟ್ಟಿ ಸೇವೆ ಶ್ಲಾಘನೀಯ : ಎಂ.ದುಗ್ಗಣ್ಣ ಸಾವಂತ ಅಭಿಮತ

ಸೌಮ್ಯ ಆರ್

ಹಳೆಯಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ವ್ಯವಸ್ಥಾಪಕಿಯಾಗಿ ಬಳ್ಕುಂಜೆ ಕಂಬಳ ಯಶಸ್ವಿಯಾಗಿ ನಿರ್ವಹಿಸಿರುವುದು ಶ್ಲಾಘನೀಯ. ಬಲ್ಕುಂಜೆ ಗುತ್ತು ಕೂಡ ಮೂಲ್ಕಿ ಅರಮನೆಗೆ ಸಂಬಂಧಿಸಿರುವುದು ನಮಗೂ ಹೆಮ್ಮೆ ಎಂದು ಮೂಲ್ಕಿ ಸೀಮೆಯ ಅರಸ ಎಂ.ದುಗ್ಗಣ್ಣ ಸಾವಂತ ಹೇಳಿದರು.

ಅರಮನೆ ಧರ್ಮಚಾವಡಿಯಲ್ಲಿ ನಡೆದ ಮಲ್ಲಿಕಾ ಶೆಟ್ಟಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಬಿಜೆಪಿ ನಾಯಕ ಜಗದೀಶ ಅಧಿಕಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪೂರಣ್ ವರ್ಮ, ನಿದ್ದೋಡಿ ಚಾವಡಿ ಮನೆ ಜಗನ್ನಾಥ್ ಶೆಟ್ಟಿ, ಕೂಡೂರು ಬೀಡು ಆಶಿಕ್ ಜೈನ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬರ್ನಾಡ್ ಉಪಸ್ಥಿತರಿದ್ದರು.

ಅರಮನೆ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಗೌತಮ್ ಜೈನ್ ವಂದಿಸಿದರು.