ಜಿಲ್ಲೆ

ಜತೆಗೆ ನೂರಕ್ಕೂ ಅಧಿಕ ರೌಡಿಗಳಿದ್ದರೂ ಆ ರೌಡಿ ಕೆನ್ನೆಗೆ ಬಿತ್ತು ಏಟು!

ವಿಜಯಪುರ: ರೌಡಿಗಳು ಕಂಡಕಂಡಲ್ಲಿ ದಾಳಿ ಇಟ್ಟು, ಸಿಕ್ಕವರನ್ನು ಹೆದರಿಸಿ ಹೊಡೆದು ಹವಾ ಸೃಷ್ಟಿಸಿಕೊಳ್ಳುತ್ತಾರೆ. ಅಂಥ ರೌಡಿಶೀಟರ್​ ಒಬ್ಬನ ಜತೆಗೆ ನೂರಕ್ಕೂ ಅಧಿಕ ರೌಡಿಗಳಿದ್ದರೂ ಬಟಾಬಯಲಲ್ಲೇ ಕಪಾಳಮೋಕ್ಷವಾಗಿದೆ. ಗನ್ ಹಿಡಿದು ಹೆದರಿಸುತ್ತಿದ್ದ ರೌಡಿ ಆ ಒಂದು ಹೊಡೆತಕ್ಕೆ ಥಂಡಾ ಹೊಡೆದಿದ್ದಾನೆ.

ಬಡ್ಡಿ ವ್ಯವಹಾರದ ಜತೆಗೆ ದಾದಾಗಿರಿ ನಡೆಸುತ್ತಿದ್ದ ಭೀಮಶಿ ಭಜಂತ್ರಿ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬಿದ್ದ ಒಂದೇ ಏಟಿಗೆ ತಣ್ಣಗಾಗಿ, ಖಾಕಿ ಖದರ್ ಮುಂದೆ ಮುದುರಿ ಹೋಗಿದ್ದಾನೆ. ಗನ್ ಇರಿಸಿಕೊಂಡಿದ್ದ ರೌಡಿಯನ್ನು ಪ್ರಶ್ನಿಸಿದ ಎಸ್​ಪಿ ಅನುಪಮ್ ಅಗರ್​ವಾಲ್​, ಯಾಕೆ ಗನ್ ಇಟ್ಟುಕೊಂಡಿದ್ದಿ ಎಂದು ಗದರಿ ಕಪಾಳಕ್ಕೆ ಹೊಡೆದಿದ್ದಾರೆ.

ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 110ಕ್ಕೂ ಅಧಿಕ ರೌಡಿಗಳ ಪರೇಡ್​ ನಡೆಯುತ್ತಿದ್ದ ಸಂದರ್ಭದಲ್ಲಿ, ಭಜಂತ್ರಿಯ ತಲೆಗೂದಲು ಹಿಡಿದು ಗೋಣು ಬಗ್ಗಿಸಿದ ಎಸ್​ಪಿ, ಆತನ ಕಪಾಳಕ್ಕೆ ಬಾರಿಸಿ ಎಚ್ಚರಿಕೆ ನೀಡಿದ್ದಾರೆ.

ಹೊಡೆತದ ದೃಶ್ಯ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...