ಪುತ್ತೂರು ಗ್ರಾಮಾಂತರ: ಬಡಗನ್ನೂರು ಗ್ರಾಮದ ಕೊಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಶಾಲಾ ಮುಖ್ಯಶಿಕ್ಷಕಿ ಸಲ್ಲಿಸಿದ್ದ ಮನವಿಗೆ ಬಡಗನ್ನೂರು ಗ್ರಾಪಂ ತುರ್ತು ಸ್ಪಂದನೆ ನೀಡಿದ್ದು, ಪಂಚಾಯಿತಿ ವತಿಯಿಂದ ಟ್ಯಾಂಕ್ ತೆರವು ಕಾರ್ಯ ನಡೆದಿದೆ.
ಕೈೊಲ ಸರ್ಕಾರಿ ಶಾಲೆಯ ಬಳಿಯಿದ್ದ ಹಳೆಯದಾದ ನೀರಿನ ಟ್ಯಾಂಕ್ ಈ ಬಾರಿಯ ಮಳೆಯಿಂದಾಗಿ ಕುಸಿದು ಬೀಳುವ ಸ್ಥಿತಿಗೆ ತಲುಪಿತ್ತು. ಅಪಾಯಕಾರಿ ಸ್ಥಿತಿಗೆ ತಲುಪಿರುವ ನೀರಿನ ಟ್ಯಾಂಕಿಯನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸುವಂತೆ ಮುಖ್ಯಶಿಕ್ಷಕಿ ಪುಷ್ಪಾವತಿ ಎಂ.ಬಡಗನ್ನೂರು ಗ್ರಾಪಂಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಬಡಗನ್ನೂರು ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ಎಂ., ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸ್ಥಳೀಯ ಸದಸ್ಯ ಸಂತೋಷ್ ಆಳ್ವ ಗಿರಿಮನೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ಸುಬ್ಬಯ್ಯ ತೆರವು ಕಾರ್ಯ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಗೌಡ, ಉಪಾಧ್ಯಕ್ಷ ಸತೀಶ್, ಜಗದೀಶ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಕಾಶ್ ರೈ ಕೊಲ ಸಹಕರಿಸಿದರು.