ಹಟ್ಟಿ ಗಣಿಯ ಈಶಾನ್ಯ ದಿಕ್ಕಿನಲ್ಲಿ ಡ್ರಿಲ್ಲಿಂಗ್ ನಡೆಸುತ್ತಿರುವುದು. ಡ್ರಿಲ್ಲಿಂಗ್ ನಡೆಸಿದ ಅದಿರುಳ್ಳ ಕಲ್ಲುಗಳು. 
ಜಿಲ್ಲೆ

ಹಟ್ಟಿಚಿನ್ನದಗಣಿ ಕಂಪನಿ ಮತ್ತಷ್ಟು ಚಿನ್ನ ಉತ್ಪಾದನೆಗೆ ಮುಂದು

ಶಶಿಧರ ಎಲ್

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಯ ಲೀಸ್ ಭೂಮಿಯಲ್ಲಿ ಹೊಸದಾಗಿ ಡ್ರಿಲ್ಲಿಂಗ್ ಆರಂಭಿಸಿರುವುದು ಗಣಿಗಾರಿಕೆ ವಿಸ್ತರಣೆಗೆ ಕಂಪನಿ ಯೋಜನೆ ಕಲ್ಪಿಸಿತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಈಶಾನ್ಯ ದಿಕ್ಕಿನಲ್ಲಿ ಆಂಜನೇಯ ಹಾಗೂ ಲಿಂಗಾವಧೂತ ದೇವಸ್ಥಾನ ಮಧ್ಯಭಾಗದಲ್ಲಿರುವ ಜಮೀನೊಂದರಲ್ಲಿ ಪಶ್ಚಿಮ ಬಂಗಾಳದ ಎಂಎಪಿಎಲ್ (ಮೈನಿಂಗ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್) MINING ASSOCIATES PRIVATE LIMITED ಕಂಪನಿಯಿಂದ ಕಳೆದ ಕೆಲ ದಿನಗಳಿಂದ ಡ್ರಿಲ್ಲಿಂಗ್ ಕಾರ್ಯ ಪ್ರಗತಿಯಲ್ಲಿದೆ.

9 ತಿಂಗಳುಗಳ ಕಾಲ ಡ್ರಿಲ್ಲಿಂಗ್

ಸದ್ಯ ಡ್ರಿಲ್ಲಿಂಗ್ ನಡೆಯುವ ಸ್ಥಳದಲ್ಲಿ ಜಿಎಸೈ (ಜಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ) Geological Survey of India ದಿಂದ ಒಂದು ಹಂತದ ಡ್ರಿಲ್ಲಿಂಗ್ ಸರ್ವೇ ಮುಗಿದಿದೆ. ಮುಂದುವರಿದ ಭಾಗವಾಗಿ ಹಟ್ಟಿ ಕಂಪನಿಯ ಯೋಜನೆ ಪ್ರಕಾರವೇ ಎಂಎಪಿಎಲ್ ಕಂಪನಿ ಲೀಸ್ ಭೂಮಿಯ ಏಳು ಕಡೆ ಅದಿರು ಸಂಭವನಿಯತೆ ಇರುವ ಕಡೆ ಕಾಲ ಡ್ರಿಲ್ಲಿಂಗ್ ನಡೆಸಲಾಗಿದೆ.

ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಸಕಾರಾತ್ಮಕ ಫಲಿತಾಂಶ ಬಂದರೆ ಭೂ ಸ್ವಾಧೀನ ಪ್ರಕ್ರಿಯೆ ನಡೆದು ಗಣಗಾರಿಕೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಚಿನ್ನದ ಬೆಲೆ ಹೆಚ್ಚಿರುವ ಸಮಯ

ಗಣಿ ಕಂಪನಿ ವ್ಯಾಪ್ತಿಯ (VANDALI VILLAGE) ವಂದಲಿ ಗ್ರಾಮದಲ್ಲಿ ಈಗಾಗಲೆ ಎರಡು ಬಾರಿ ಡ್ರಿಲ್ಲಿಂಗ್ ಕಾರ್ಯ ನಡೆದು ಫಲಿತಾಂಶಕ್ಕೆ ಎದುರು ನೋಡಲಾಗುತ್ತಿದೆ. ಈಶಾನ್ಯ ದಿಕ್ಕಿನಲ್ಲಿಯೂ ಸಹಿತ ಸಾಕಷ್ಟು ಅದಿರಿನ ನಿಕ್ಷೇಪಗಳಿವೆ.

ಸ್ಥಳಿಯರಿಗೆ ಉಪಯೋಗವಾಗ

ಚಿನ್ನದ ಬೆಲೆ ಹೆಚ್ಚಿರುವ ಪ್ರಸ್ತುತ ಸಮಯದಲ್ಲಿ ಗಣಿಗಾರಿಕೆ (Mining) ವಿಸ್ತರಣೆಯಿಂದ ಕಂಪನಿ, ಕಾರ್ಮಿಕರು, ಸ್ಥಳಿಯರಿಗೆ ಉಪಯೋಗವಾಗಬಹುದೆಂಬ ನಿರೀಕ್ಷೆ ಕಾರ್ಮಿಕ ವಲಯದಲ್ಲಿ ಮನೆ ಮಾಡಿದೆ.

ಎಲ್ಲ ಹಂತದ ಡ್ರಿಲ್ಲಿಂಗ್ ಮುಗಿದ ಬಳಿಕ ಫಲಿತಾಂಶ ಹೊರಬಿದ್ದ ನಂತರವಷ್ಟೇ ನಿಯಮದನ್ವಯ ಮುಂದಿನ ಕಾರ್ಯ ನಡೆಯುತ್ತದೆ.| ಪ್ರಕಾಶ್, ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಚಿನ್ನದ ಬೆಲೆ ಉತ್ತಮವಾಗಿರುವ ಈ ಸಮಯದಲ್ಲಿ ವಿಸ್ತರಣೆ ಕಾರ್ಯ ಪ್ರಸ್ತುತವಾಗಿದೆ. ಗಣಿ ವಿಸ್ತರಣೆ ಮಾಡಲು, ಸರ್ಕಾರ-ಆಡಳಿತವರ್ಗ ಸೂಕ್ತ ಕ್ರಮಕೈಗೊಳ್ಳಬೇಕು. | ಎಸ್.ಎಂ ಶಫಿ, ಹ.ಚಿ.ಗ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ