ಜಿಲ್ಲೆ

ಕ್ಷುಲ್ಲಕ ಜಗಳ: ಮಗನ ತಲೆಗೆ ಹೊಡೆದು ಕೊಂದ ವೃದ್ಧ ತಂದೆ

arunakunigal

ಬೆಂಗಳೂರು: ವೃದ್ಧನೊಬ್ಬ ತನ್ನ ಮಗನನ್ನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಭವಿಸಿದೆ.

ಅಬ್ಬಿಗೆರೆ ‌ನಿವಾಸಿ ಹುಸೇನ್​ರ ಪುತ್ರ ಬಾಬರ್​ ಕೊಲೆಯಾದವ. ಅಪ್ಪ ಹುಸೇನ್​ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಮಗ ಗಾರೆ ಕೆಲಸ‌ ಮಾಡುತ್ತಿದ್ದ. ಇದನ್ನೂ ಓದಿರಿ ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

ಪ್ರತಿದಿನ ಕುಡಿದ ಅಮಲಿನಲ್ಲಿ ತಂದೆ ಜತೆ ಜಗಳ‌ ಮಾಡುತ್ತಿದ್ದ ಬಾಬರ್, ನಿನ್ನೆ ಸಂಜೆಯೂ ಕುಡಿದು ಮನೆಗೆ ಬಂದಿದ್ದ. ಅದೇ ರಾಗ ಎಂಬಂತೆ ಅಂದೂ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ವೃದ್ಧ ತಂದೆ ಕೊಡಲಿಯಿಂದ ಮಗನ ತಲೆಗೆ ಬೀಸಿದ್ದಾನೆ.

ಗಂಭೀರಗಾಯಗೊಂಡ ಮಗ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ‌ ಮೃತಪಟ್ಟಿದ್ದಾನೆ. ಮಗನನ್ನುಕೊಂದ ಆರೋಪಿ ಹುಸೇನ್​(68) ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.