ಶಿವರಾತ್ರಿ ಪ್ರಯುಕ್ತ ಕ್ರಿಕೆಟ್ ಟೂರ್ನಿ: ಗೆದ್ದವರಿಗೆ ಸಿಗುತ್ತೆ ಜೋಡಿಕುರಿ ಜತೆಗೆ ವಿಸ್ಕಿ ಬಾಟಲಿ...

cricket
Published on

ಹಾಸನ: ಅರಸೀಕೆರೆ ತಾಲೂಕಿನ ಆಲದಹಳ್ಳಿಯಲ್ಲಿ ಶಿವರಾತ್ರಿ ‌ಪ್ರಯುಕ್ತ ವಿಶೇಷ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಲಾಗಿದೆ. ಈ ಪಂದ್ಯಾವಳಿಯ ವಿಜೇತರಿಗೆ ಟ್ರೋಫಿ ಜತೆಗೆ ಕುರಿಮರಿ ಮತ್ತು ವಿಸ್ಕಿ ಬಾಟಲಿ ಸಿಗುತ್ತೆ! ಅಷ್ಟೇ ಅಲ್ಲ, ಸಮಾಧಾನಕರ ಬಹುಮಾನವಾಗಿ ಕೋಳಿಗಳನ್ನು ಕೊಡಲಾಗುತ್ತೆ.

ಅಂದಹಾಗೆ ಈ ಪಂದ್ಯದ ಹೆಸರೇ 'ಜೋಡಿಮರಿ ಕ್ರಿಕೆಟ್ ಟೂರ್ನಿ'. ಶಿವರಾತ್ರಿ ಪ್ರಯುಕ್ತ ಮೂರು ದಿನ ಅಂದರೆ ಫೆ.10, 11, 12ರವರೆಗೆ ನಡೆಯಲಿರುವ ಈ ಪಂದ್ಯಾವಳಿಯನ್ನು ಗ್ರಾಮದ ಯುವಕರು ಆಯೋಜಿಸಿದ್ದಾರೆ. ಕಿಕೆಟ್​ ಟೂರ್ನಿಯ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ಜೋಡಿಕುರಿಗಾಗಿ ಕಾದಾಟ ಎಂದೆಲ್ಲ ಕಮೆಂಟ್​ ಬರುತ್ತಿದೆ.

'ಜೋಡಿ ಮರಿ ಕ್ರಿಕೆಟ್ ಟೂರ್ನಿ'ಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಜತೆಗೆ ಜೋಡಿಕುರಿ ಮತ್ತು 2 ವಿಸ್ಕಿ ಬಾಟಲಿ, ರನ್ನರ್​ಅಫ್​ ತಂಡ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ಒಂದು ಕುರಿ ಜತೆಗೆ ಒಂದು ವಿಸ್ಕಿ ಬಾಟಲಿ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ನಾಲ್ಕು ಕೋಳಿ ಕೊಡಲಾಗುತ್ತೆ. ಆಯಾ ಬಹುಮಾನಗಳ ಕೆಳಗೆ ದಾನಿಗಳ ಹೆಸರನ್ನೂ ಪೋಸ್ಟರ್​ನಲ್ಲಿ ಹಾಕಿಸಲಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net