ಜಿಲ್ಲೆ

2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್​ವೈ

rashmirhebbur

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಕುತೂಹಲದ ನಡುವೆ ಇಂದು ಎರಡನೇ ಬಾರಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. "ಜುಲೈ 25 ಕ್ಕೆ ಹೈಕಮಾಂಡ್​ನಿಂದ ಸಂದೇಶ ಬರಬಹುದು ಎಂದು ಕಾಯುತ್ತಿದ್ದೇನೆ. ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ" ಎಂದಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವುದಕ್ಕೆ ಮುನ್ನ ಮಾತನಾಡಿದ ಸಿಎಂ ಬಿಎಸ್​​ವೈ, "ನಾನು ಅಧಿಕಾರದಲ್ಲಿ ಇರಲಿ, ಬಿಡಲಿ. ಪಕ್ಷ ಸಂಘಟನೆ ಮಾಡಿ ಮುಂದೆಯೂ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ" ಎಂದಿದ್ದಾರೆ.

ಜೊತೆಗೆ, "ನಾನು ಯಾರನ್ನು ಸಿಎಂ ಮಾಡಬೇಕೆಂದು ಹೇಳುವುದಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಬೇಕಾದರೂ ಮಾಡಲಿ. ಯಾವ ಸಮುದಾಯಕ್ಕೆ ನೀಡಬೇಕೆಂಬುದರ ಬಗ್ಗೆಯೂ ಮಾತನಾಡಲ್ಲ" ಎಂದ ಯಡಿಯೂರಪ್ಪ, ವರಿಷ್ಠರ ಸಂದೇಶ ಇನ್ನೂ ಬಂದಿಲ್ಲ, ಈಗಲೇ ಏಕೆ ಅವಸರದ ಮಾತು ಎಂದು ನಿಗೂಢತೆ ಮುಂದುವರೆಸಿದ್ದಾರೆ.