More

    VIDEO | ಬಕ್ರೀದ್ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ

    ನವದೆಹಲಿ : ಕರೊನಾ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರುವುದರ ಮೇಲೆ ಹಲವೆಡೆ ವಿಧಿಸಲಾಗಿರುವ ನಿರ್ಬಂಧಗಳ ನಡುವೆ, ಇಂದು ದೇಶಾದ್ಯಂತ ಮುಸಲ್ಮಾನರು ಬಕ್ರೀದ್ ಆಚರಿಸುತ್ತಿದ್ದಾರೆ. ಪರಸ್ಪರ ಭೇಟಿಯಾಗಿ ಶುಭ ಹಾರೈಸುವುದಕ್ಕೆ ಹೆಚ್ಚಿನ ಮಹತ್ವವಿರುವ ಈ ಹಬ್ಬವನ್ನು ಎರಡನೇ ವರ್ಷ ಕೋವಿಡ್​ ಕರಿನೆರಳಿನಲ್ಲಿ ಆಚರಿಸಲಾಗುತ್ತಿದೆ.

    VIDEO | ಬಕ್ರೀದ್ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ

    ಪ್ರೀತಿ ಮತ್ತು ತ್ಯಾಗದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ, ಇಂದು ದೇಶದ ಪ್ರಮುಖ ಮುಸಲ್ಮಾನ ಪ್ರಾರ್ಥನಾ ಸ್ಥಳಗಳಲ್ಲಿ ನಿಯಮಿತ ಮಟ್ಟದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿರುವ ವರದಿಗಳು ಬಂದಿವೆ. ಪಂಜಾಬ್​ನ ಅಮೃತಸರದಲ್ಲಿನ ಖೈರುದ್ದೀನ್ ಮಸೀದಿಯಲ್ಲಿ ಇಂದು ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಾವಳಿಯನ್ನು ಎಎನ್​ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ.

    ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, “ಈದ್​ ಮುಬಾರಕ್​” ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇತರ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷಗಳ ನಾಯಕರು ಕೂಡ ಬಕ್ರೀದ್​ ಆಚರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಶುಭಾಶಯ ಹೇಳಿದ್ದಾರೆ. (ಏಜೆನ್ಸೀಸ್)

    VIDEO | ಒಲಂಪಿಕ್​ ಆಟಗಾರ್ತಿ ಲವ್ಲೀನಾ ಬೆಂಬಲಕ್ಕೆ ಸೈಕಲ್​ ಜಾಥಾ

    ಎಚ್​​ಡಿಕೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ : ಸಚಿವ ಈಶ್ವರಪ್ಪ

    ಕಾರಿನಲ್ಲಿ ಹಣವಿಟ್ಟು ಚಾಲಕನಿಗೆ ಹೇಳಿ ಹೋದರು… ವಾಪಸ್​ ಬಂದಾಗ ಕಾದಿತ್ತು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts