ಹೆಬ್ರಿ: ರಾಷ್ಟ್ರ ಸೇವಿಕಾ ಸಮಿತಿಯ ಸಂಸ್ಥಾಪಕಿ ಲಕ್ಷ್ಮೀ ಬಾಯಿ ಕೇಲ್ಕರ್ 90 ವರ್ಷದ ಹಿಂದೆ ಹುಟ್ಟು ಹಾಕಿದ್ದರಿಂದ ಮಹಿಳೆಯರ ಸಬಲೀಕರಣ ಆಗಿದೆ. ಸಶಕ್ತ ಮಹಿಳೆಯಿಂದ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಗುರು ಎಂದರೆ ಅಜ್ಞಾನವೆಂಬ ರೋಗಕ್ಕೆ ಜ್ಞಾನವೆಂಬ ಔಷಧ ನೀಡುವುದು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಉಡುಪಿ ಜಿಲ್ಲಾ ಪ್ರಮುಖ್ ಕಲ್ಪನಾ ಭಾಸ್ಕರ್ ಹೇಳಿದರು.
ಹೆಬ್ರಿ ರಾಮಮಂದಿರದಲ್ಲಿ ನಡೆದ ಗುರು ಪೂಜಾ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ಯಾಮಲಾ.ವಿ.ಶೆಟ್ಟಿ ಭಗವಾ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಗುರು ಕಾಣಿಕೆ ಅರ್ಪಿಸಿದರು.
ರಾಷ್ಟ್ರ ಸೇವಿಕಾ ಸಮಿತಿಯ ತಾಲೂಕು ಕಾರ್ಯವಾಹಿಕೆ ಮೀನಾಕ್ಷಿ, ಮಾತೆಯರು ಉಪಸ್ಥಿತರಿದ್ದರು. ರಮ್ಯಾ ಪೈ ಸ್ವಾಗತಿಸಿದರು. ವಿದ್ಯಾ ನಾಯಕ್ ವಂದಿಸಿದರು. ನಂದಿನಿ ಡ್ಯಾಂಗೆ ನಿರೂಪಿಸಿದರು.