ಜಿಲ್ಲೆ

ಮಧ್ಯಂತರ ಪರಿಹಾರಕ್ಕೆ ಅಂಕಿತ: ಮೂಲ ವೇತನದ ಶೇ.17 ಹೆಚ್ಚಳ; ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ನಿವೃತ್ತರಿಗೂ ಅನ್ವಯ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರ್ಕಾರ ಮೂಲ ವೇತನದ ಶೇ.17 ಮಧ್ಯಂತರ ಪರಿಹಾರ ಮಂಜೂರು ಮಾಡಿ ಬುಧವಾರ ಆದೇಶಿಸಿದ್ದು, 2023ರ ಏ.1ರಿಂದ ಈ ಹೆಚ್ಚಳ ಅನ್ವಯಿಸಲಿದೆ.

ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ನಿವೃತ್ತರು, ಕುಟುಂಬ ನಿವೃತ್ತಿ ವೇತನದಾರರು, ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರಿಗೂ ಮಧ್ಯಂತರ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ (ಸೇವೆಗಳು-2) ಆದೇಶದಲ್ಲಿ ತಿಳಿಸಿದೆ.

ಆದೇಶದಲ್ಲೇನಿದೆ ?

-ಸರ್ಕಾರಿ ನೌಕರ ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿ ಪಡೆಯುತ್ತಿರುವ ವೇತನ, ಅದರಲ್ಲಿ ವೇತನ ಶ್ರೇಣಿ ಗರಿಷ್ಠಕ್ಕಿಂತ ಹೆಚ್ಚಾಗಿ ಸ್ಥಗಿತ ವೇತನ ಬಡ್ತಿ ನೀಡಿದ್ದರೆ, ಸ್ಥಗಿತ ವೇತನ ಬಡ್ತಿಯೇ ಮೂಲ ವೇತನ

-ಕರ್ನಾಟಕ ನಾಗರಿಕ ಸೇವಾ ಪರಿಷ್ಕೃತ ನಿಯಮಾವಳಿ, ಉಪನಿಯಮದಂತೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ, ಆ ವೈಯಕ್ತಿಕ ವೇತನ

-ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಮಂಜೂರು ಮಾಡಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರುತ್ತವೆ.

-ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ

-ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದಾರರಿಗೂ ಶೇ.17 ಮಧ್ಯಂತರ ಪರಿಹಾರ ಅನ್ವಯ

-ಸ್ಥಳೀಯ ಸಂಸ್ಥೆಗಳ ನೌಕರರು, ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು, ವಿವಿಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ನೌಕರರಿಗೂ ಅನ್ವಯ

-ಸ್ಥಳೀಯ ಸಂಸ್ಥೆಗಳು ಮತ್ತು ವಿವಿ ನೌಕರರಿಗೆ ಮಂಜೂರು ಮಾಡಿರುವ ಈ ಸೌಲಭ್ಯದ ವೆಚ್ಚವನ್ನು ಅನ್ವಯಿಸುವ ಸ್ಥಳೀಯ ಸಂಸ್ಥೆಗಳೇ ಭರಿಸಬೇಕು

-ಯುಜಿಸಿ/ಎಐಸಿಟಿಇ/ ಎನ್​ಜೆಪಿಸಿ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರು ಮತ್ತು ಎನ್​ಜೆಪಿಸಿ ಪಿಂಚಣಿದಾರರಿಗೆ ಅನ್ವಯಿಸುವುದಿಲ್ಲ

-ತಾತ್ಕಾಲಿಕ ಪರಿಹಾರದ ಕಾರಣದಿಂದ ಸಂದಾಯ ಮಾಡಲು ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಶಗಳನ್ನು ಮುಂದಿನ ರೂಪಾಯಿಗೆ ಪೂರ್ಣಾಂಶಗೊಳಿಸಬೇಕು. ಐವತ್ತು ಪೈಸೆಗಿಂತ ಕಡಿಮೆಯಿರುವ ಭಿನ್ನಾಂಶಗಳನ್ನು ಕಡೆಗಣಿಸತಕ್ಕದ್ದು

-ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಟ ಸಂಭಾವನೆಯಾಗಿದ್ದು, ನಿವೃತ್ತಿ ಸೌಲಭ್ಯ/ ತುಟ್ಟಿಭತ್ಯೆಯನ್ನು ನಿರ್ಧರಿಸುವಾಗ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಪರಿಗಣಿಸತಕ್ಕದ್ದಲ್ಲ

-ತಾತ್ಕಾಲಿಕ ಪರಿಹಾರದ ವೆಚ್ಚವನ್ನು ವೇತನ ವೆಚ್ಚ ಭರಿಸುವ ಲೆಕ್ಕಶೀರ್ಷಿಕೆಯಿಂದಲೇ ಭರಿಸತಕ್ಕದ್ದು

ಹೆಚ್ಚಲಿರುವ ವೇತನದ ಮೊತ್ತವೆಷ್ಟು ?

ಮೂಲ ವೇತನ ಮಧ್ಯಂತರ ಪರಿಹಾರ (ರೂ.ಗಳಲ್ಲಿ)

17000 2890

17400 2958

17800 3026

18200 3094

18600 3162

19050 3239

19500 3315

19950 3392

20400 3468

20900 3553

21400 3638

21900 3723

22400 3808

22950 3902

23500 3995

24050 4089

24600 4182

25200 4284

25800 4386

26400 4488

27000 4590

27650 4701

28300 4811

28950 4922

29600 5032

30350 5160

31100 5287

31850 5415

32600 5542

33450 5687

34300 5831

35150 5976

36000 6120

36950 6282

37900 6443

38850 6605

39800 6766

40900 6953

42000 7140

43100 7327

44200 7514

45300 7701

46400 7888

47650 8101

48900 8313

50150 8526

51400 8738

52650 8951

53900 9163

55350 9410

56800 9656

58250 9903

59700 10149

61150 10396

62600 10642

64250 10923

65900 11203

67550 11484

69200 11764

70850 12045

72500 12325

74400 12648

76300 12971

78200 13294

80100 13617

82000 13940

83900 14263

86100 14637

88300 15011

90500 15385

92700 15759

97100 16507

99600 16932

102100 17357

104600 17782

107100 18207

109600 18632

112100 19057

114900 19533

117700 20009

120500 20485

123300 20961

126100 21437

128900 21913

132000 22440

135100 22967

138200 23494

141300 24021

144400 24548

147500 25075

150600 25602