ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ 49ನೇ ವರ್ಷದ ಗಣೇಶ ಉತ್ಸವ ಸಂಪನ್ನಗೊಂಡಿತು 
ಜಿಲ್ಲೆ

ವೈಭವದ ಪುರಮೆರವಣಿಗೆ, ಗಣಪನ ವಿಸರ್ಜನೆ

ಇಂದಿರಾ ಎನ್ ಕೆ

ಕೋಟ: ಕೋಟ ಅಮೃತೇಶ್ವರಿ ದೇಗುಲ ಸಭಾಂಗಣದಲ್ಲಿ ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ 49ನೇ ವರ್ಷದ ಗಣೇಶ ಉತ್ಸವ ಸಂಪನ್ನಗೊಂಡಿತು.

ಬುಧವಾರ ಕೋಟದ ಗಣಪನಿಗೆ ಮೂಡುಗಣಪತಿ ಸೇವೆ, ವಿವಿಧ ಪೂಜಾ ಕಾರ್ಯದೊಂದಿಗೆ ಕೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುರಮೆರವಣಿಗೆ ಸುಮಾರು 15ಕಿಮೀ ಕ್ರಮಿಸಿ ಭಕ್ತರ ಸಮ್ಮುಖದಲ್ಲಿ ಕೋಟ ಪಡುಕಡಲ ಸಮುದ್ರದಲ್ಲಿ ವಿಸರ್ಜನೆಗೊಳಿಸಲಾಯಿತು.

ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳಾದ ಜನತಾ ಫಿಶ್‌ಮೀಲ್, ಬಾರಿಕೆರೆ ಯುವಕ ಮಂಡಲ, ಅಮೃತ ಯುವಕ ಸಂಘ ಕದ್ರಿಕಟ್ಟು, ಅರ್ಚಕರ ಯುವ ಸಂಘ ಕೋಟ, ಹರ್ತಟ್ಟು ಯುವಕ ಮಂಡಲ ಕೋಟ, ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಇವರ ಸ್ತಬ್ಧ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ವಿವಿಧ ಭಾಗಗಳಲ್ಲಿ ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್, ಜನತಾ ಸಂಸ್ಥೆ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಉಪಹಾರದ ವ್ಯವಸ್ಥೆ ಕಲ್ಪಿಸಿದರು.

ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್, ಅಧ್ಯಕ್ಷ ರಮಾನಾಥ ಜೋಗಿ, ಕಾರ್ಯಾಧ್ಯಕ್ಷ ಪ್ರಭಾಕರ್ ಅಡಿಗ, ಕಾರ್ಯದರ್ಶಿ ಚಂದ್ರಯ್ಯ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್ ಮತ್ತಿತರರರು ಪಾಲ್ಗೊಂಡಿದ್ದರು.