ಬೆಳ್ತಂಗಡಿ: ಮದ್ದಡ್ಕ ಎಂಬಲ್ಲಿನ ಮನೆಯೊಂದರ ಮೇಲೆ ಅಬಕಾರಿ ದಳ ದಾಳಿ ಮಾಡಿ ಮನೆಯಲ್ಲಿ 2 ಪ್ಲಾಸ್ಟಿಕ್ ಡಬ್ಬದಲ್ಲಿ 250 ಗ್ರಾಂ ಗಾಂಜಾ ದೊರಕಿದ್ದು, 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿ ಮಹಮ್ಮದ್ ರಫೀಕ್ ಎಂಬಾತ ಪರಾರಿಯಾಗಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಉಪವಿಭಾಗ ನಿರೀಕ್ಷಕ ನವೀನ್ ಕುಮಾರ್ ಪ್ರಕರಣ ದಾಖಲಿಸಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಆರೋಪಿ ಮಹಮ್ಮದ್ ರಫೀಕ್ ಹಳೆಯ ಪ್ರಕರಣದ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಲಾಗಿದೆ.