ಐವನ್ ಡಿಸೋಜ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆ ಗೌರವಾಧ್ಯಕ್ಷ

mng--5 June Ivan
Published on

ಮಂಗಳೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಬೆಂಗಳೂರು ಇದರ ರಾಜ್ಯದ ಮಹಾ ಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಗಯ್ಯ ಅವರ ಘನ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಚಾಲಕರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರನ್ನು ವೇದಿಕೆಯ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ದ.ಕ ಜಿಲ್ಲಾ ಕರ್ನಾಟಕ ನಿವೃತ್ತ ಸರ್ಕಾರಿ ನೌಕರರ ವೇದಿಕೆ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ಪದಾಧಿಕಾರಿಗಳು ಮತ್ತು ವೇದಿಕೆಯ ನಿವೃತ್ತ ಸರ್ಕಾರಿ ನೌಕರರು ಅವರಿಗೆ ಶುಭ ಹಾರೈಸುವ ಜತೆಗೆ ತಮ್ಮ ವೇದಿಕೆಯ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net