ಅಡ್ಯಾರ್‌ಪದವು ಬ್ರಹ್ಮಕಲಶೋತ್ಸವ ಹಸಿರು ಹೊರೆಕಾಣಿಕೆ ಮೆರವಣಿಗೆ

mng--5 June Adyarpadvu
Published on

ಮಂಗಳೂರು: ಅಡ್ಯಾರ್‌ಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೂ.5ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಹೊರೆಕಾಣಿಕೆ ಸಮರ್ಪಣ ಮೆರವಣಿಗೆ ಗುರುವಾರ ನಡೆಯಿತು.

ಅಡ್ಯಾರು ಸೋಮನಾಥಕಟ್ಟೆಯ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಹೊರೆ ಕಾಣಿಕೆ ಮೆರವಣಿಗೆಯು ಅಡ್ಯಾರು ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥವಾನವಾಗಿ ಸಾಗಿ ನೀರು ಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ನೀರುಮಾರ್ಗವೃತ್ತವಾಗಿ ಓಂಟೆಮಾರ್ ಮಾರ್ಗವಾಗಿ ಅಡ್ಯಾರ್‌ಪದವು ಕಟ್ಟೆ ತಲುಪಿತು. ಅಲ್ಲಿಂದ ಭಕ್ತರ ಪಾದಯಾತ್ರೆಯ ಮೂಲಕವಾಗಿ ಶ್ರೀ ಕೋರ‌್ದಬ್ಬು ದೈವಸ್ಥಾಬನ, ಶ್ರೀ ರಾಮಾಂಜನೇಯ ಮಂದಿರವಾಗಿ ಕ್ಷೇತ್ರಕ್ಕೆ ತಲುಪಿತು.

ಭಕ್ತರು ಹಾಗೂ ವಿವಿಧ ಸಂಘಟನೆಗಳು ನೀಡಿದ ತರಕಾರಿ, ದಿನಸಿ ವಸ್ತುಗಳು, ಪಾತ್ರೆಗಳು ಸೇರಿದಂತೆ ವಿವಿಧ ವಸ್ತುಗಳು ಕ್ಷೇತ್ರಕ್ಕೆ ಸಮರ್ಪಿಸಲ್ಪಟ್ಟಿತು. ಚೆಂಡೆ ಬಳಗ, ಕುಣಿತ ಭಜನೆ ತಂಡಗಳು ಮೆರವಣಿಗೆಗೆ ಮೆರಗು ನೀಡಿತು.

ಕ್ಷೇತ್ರ ತಂತ್ರಿ ವೇ. ಮೂ.ಸೀತಾರಾಮ ಆಚಾರ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಶ್ರವಣ್ ಶೆಟ್ಟಿ ಮೊಗರುಗುತ್ತು, ಗೌರವಾಧ್ಯಕ್ಷರಾದ ಸುರೇಂದ್ರ ಕಂಬಳಿ, ಜಯಶೀಲ ಅಡ್ಯಂತಾಯ, ಪ್ರಮುಖರಾದ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ದಿವಾಕರ್ ನಾಕ್, ಪ್ರದೀಪ್ ಕುಮಾರ್ ಶೆಟ್ಟಿ, ಅಜಿತ್ ಶೆಟ್ಟಿ, ಸಚಿನ್ ಹೆಗ್ಡೆ ಬೈದೇವುಗುತ್ತು, ಸಮಿತಿ ಕಾರ್ಯಾಧ್ಯಕ್ಷರಾದ ಆಶ್ರಿತ್ ನೋಂಡ, ದೇವಳದ ಆಡಳಿತ ಮಂಡಳಿ ಗೌರವಾಧ್ಯಕ್ಷ ರಾಜರತ್ನ ಸನಿಲ್, ಆಡಳಿತ ಮಂಡಳಿ ಅಧ್ಯಕ್ಷ ಮನೋಜ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net