ಗಂಗೊಳ್ಳಿ: ಆಲೂರು ಗ್ರಾಮದ ಆಲೂರು ಪಾರಿಯಲ್ಲಿ ಕೋಳಿ ಅಂಕ, ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಉಪನಿರೀಕ್ಷಕ ಹರೀಶ್ ಆರ್. ನೇತೃತ್ವದ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವ ಕುಮಾರ್, ನಾಗೇಶ್, ಗಣೇಶ್, ಸುನಿಲ್, ಹರೀಶ್, ಅಶೋಕ, ವಿಜಯ ಭಾಸ್ಕರ ಬಂಧಿತರು. ಕೋಳಿಗಳು, ಕೋಳಿ ಬಾಳು, 2,500 ರೂ.ನಗದು ಸಹಿತ ವಿವಿಧ ಸಲಕರಣೆಗಳನ್ನು ವಶಪಡಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.