ಜಿಲ್ಲೆ

ಮನೆಯಿಂದಲೇ ಶುರುವಾಗಲಿ ಸ್ವಚ್ಛತೆಯ ಅರಿವು : ಉದ್ಯಮಿ ಪುಷ್ಪರಾಜ ಚೌಟ ಪ್ರತಿಪಾದನೆ

ಮೂಲ್ಕಿ: ನಮ್ಮ ಮನೆಯ ಪರಿಸರ ಸ್ವಚ್ಛವಾಗಿರಿಸಿದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಿದ್ದು ಪರಿಸರ ರಕ್ಷಣೆ ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ಉದ್ಯಮಿ ಪುಷ್ಪರಾಜ ಚೌಟ ಹೇಳಿದರು.

ಮೂಲ್ಕಿ ಚಿತ್ರಾಪು ಯುವಕ-ಯುವತಿ ಮಂಡಲ ಮತ್ತು ಮಹಿಳಾ ಮಂಡಲ ಹಾಗೂ ಬಪ್ಪನಾಡು ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಆಶ್ರಯದಲ್ಲಿ ಮಂಗಳೂರು ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದೊಂದಿಗೆ ಚಿತ್ರಾಪು ಕೆ.ಎಸ್.ರಾವ್ ಸ್ಮಾರಕ ಪ್ರೌಢಶಾಲೆಯಲ್ಲಿ ಆಯೋಜಿಸಲಾದ, ಆರೋಗ್ಯ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸಾ ಉಚಿತ ಶಿಬಿರದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುವಾಂಷಿ ಮತ್ತು ಡಾ.ಗೆಹೆನೋ ಮಾತನಾಡಿದರು. ಯುವಕ ಮಂಡಲದ ಅಧ್ಯಕ್ಷ ತುಷಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ, ಕಾರ್ಯದರ್ಶಿ ಸುದರ್ಶಿನಿ ಮಾರ್ಗರೆಟ್, ಯುವಕ ಮಂಡಲದ ಕಾರ್ಯದರ್ಶಿ ಸಂದೀಪ್ ಸುವರ್ಣ, ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.