ಜಿಲ್ಲೆ

ಕೆರೆಗೆ ಹಾರ: ಈಜಲು ಹೋದ ನಾಲ್ವರು ನೀರುಪಾಲು; ಮೂವರ ಶವ ಇನ್ನೂ ನಾಪತ್ತೆ..

ಬೀದರ್: ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲಾಗಿದ್ದು, ಆ ಪೈಕಿ ಒಬ್ಬನ ಶವವಷ್ಟೇ ಪತ್ತೆಯಾಗಿದ್ದು, ಉಳಿದವರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೀದರ್ ಜಿಲ್ಲೆಯ ಹುಮನಾಬಾದ್​ ತಾಲೂಕಿನ ಘೋಡವಾಡಿಯಲ್ಲಿ ಈ ಘಟನೆ ಅವಘಡ ಉಂಟಾಗಿದೆ.

ಹೈದರಾಬಾದ್​ನ ಬೊರಾಬಂಡಾ ನಿವಾಸಿಗಳಾದ ಸೈಯದ್ ಅಕ್ಬರ್ ಉಸ್ಮಾನ್ (17), ಮಹಮ್ಮದ್ ಖಾನ್ (19), ಸೈಯದ್ ಜುನೈದ್ (15), ಮಹಮ್ಮದ್ ಫಾದಖಾನ್ ಸಲೀಂ (18) ಮೃತಪಟ್ಟವರು.

ಘೋಡವಾಡಿಯ ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಕೆರೆಯಲ್ಲಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ನೀರುಪಾಲಾದ ನಾಲ್ವರ ಪೈಕಿ ಸೈಯದ್ ಅಕ್ಬರ್ ಶವ ಮಾತ್ರ ಸಿಕ್ಕಿದ್ದು, ಉಳಿದ ಮೂವರ ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹುಮನಾಬಾದ್ ಪೊಲೀಸ್ ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.