ಬದಿಯಡ್ಕ: ಶಬರಿಗಿರಿ ಅಯ್ಯಪ್ಪ ಮಂದಿರ ಮಾತೃ ಸಮಿತಿ ನೂತನ ಅಧ್ಯಕ್ಷರಾಗಿ ಪ್ರತಿಭಾ ಬಿ. ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಜಗದಂಬಾ ಎಂ. ಹಾಗೂ ಲೀಲಾವತಿ ಕೆ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ಗಿರೀಶ್ ರೈ ಅವರನ್ನು, ಕಾರ್ಯದರ್ಶಿಗಳಾಗಿ ರಾಜೇಶ್ವರಿ ರೈ, ಸುನಿತಾ ಕಾಡಮನೆ, ಶ್ವೇತಾ ಸಂತೋಷ್ ರೈ ಮತ್ತು ಜಯಲಕ್ಷ್ಮೀ ಕೆ, ಕೋಶಾಧಿಕಾರಿಯಾಗಿ ರೇಷ್ಮಾ ಎ.ಎಸ್. ಅವರನ್ನು ಆರಿಸಲಾಯಿತು. ನಿರ್ವಾಣ ಸಮಿತಿಯ ಅಧ್ಯಕ್ಷ ದೇವದಾಸ್ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟಿಗಳಾದ ಜಯಂತಿ ಚೆಟ್ಟಿಯಾರ್, ರಮೇಶ್ ಆಳ್ವ ಹಾಗೂ ಕಷ್ಣ ಚುಳ್ಳಿಕಾನ ಉಪಸ್ಥಿತರಿದ್ಧರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ನರೇಂದ್ರ ಬಿ.ಎನ್ ಸ್ವಾಗತಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ರೈ ಕೆ. ವಂದಿಸಿದರು.