ಜಿಲ್ಲೆ

ಕಬ್ಬನ್ ಪಾರ್ಕ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವಿದೇಶಿ ಮಹಿಳೆ ಬಳಿ ಪ್ಯಾಂಟ್​ ಬಿಚ್ಚಿ ಅಸಭ್ಯ ವರ್ತನೆ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಸುತ್ತಾಡಿ ವಿಶ್ರಾಂತಿ ಪಡೆಯುತ್ತಿದ್ದ ವಿದೇಶಿ ಮಹಿಳೆ ಬಳಿ 50 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಕುರಿತು ಸ್ವೀಡನ್ ದೇಶದ ಮಹಿಳೆ, ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇಶಾ ಫೌಂಡೇಷನ್ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವೀಡನ್‌ನಿಂದ ಆಗಮಿಸಿದ್ದ ಮಹಿಳೆ, ಬೆಂಗಳೂರಿಗೆ ಬಂದು ಕಬ್ಬನ್ ಪಾರ್ಕ್ ನೋಡುವ ಆಸೆಯಿಂದ ಎಲ್ಲೆಡೆ ಸುತ್ತಾಡಿ ಕೊನೆಗೆ ಮಧ್ಯಾಹ್ನ 12 ಗಂಟೆಗೆ ವಿಶ್ರಾಂತಿ ಪಡೆಯಲು ಪಾರ್ಕ್‌ನಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿ ಅಲ್ಲಿಂದ ಹೋಗಿದ್ದಾನೆ. ನೊಂದ ವಿದೇಶಿ ಪ್ರಜೆ, ಸ್ನೇಹಿತನ ಸಹಾಯದಿಂದ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಎಫ್​ಐಆರ್ ದಾಖಲಾದ ಮೇಲೆ ಮಹಿಳೆ, ವಿದೇಶಕ್ಕೆ ಹೋಗುವ ಕಾರಣಕ್ಕೆ ಕೇಸ್ ವಾಪಸ್ ಪಡೆಯುವುದಾಗಿ ಬರೆದುಕೊಟ್ಟು ಹೋಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.