ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ ಪ್ರಕರಣದಲ್ಲಿ ಇಂದು ಮತ್ತೊಬ್ಬ ಮೀನುಗಾರನ ಶವ ಪತ್ತೆಯಾಗಿದೆ. ಬೋಟ್ ಮುಳುಗಡೆಯಾದಲ್ಲಿಂದ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದ್ದು, ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿತ್ತು.
ಮಂಗಳೂರಿನ ಬೆಂಗ್ರೆ ನಿವಾಸಿ ಅನ್ಸರ್ನ ಶವ ಎಂದು ಗುರುತಿಸಲಾಗಿದೆ. ಇನ್ನೂ ಮೂವರ ಪತ್ತೆಯಾಗಬೇಕಾಗಿದ್ದು, ತಣ್ಣೀರುಬಾವಿ ಮುಳುಗು ತಜ್ಞರ ತಂಡ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಆರಂಭ ಚಿಂತನ್, ಗೀಯಾ,ಹಸೈನಾರ್ ಪತ್ತೆಯಾಗದ ಮೀನುಗಾರರು. ಪಾಂಡುರಂಗ ಮತ್ತು ಪ್ರೀತಂ ಎಂಬುವವರ ಮೃತದೇಹ ನಿನ್ನೆ ಪತ್ತೆಯಾಗಿತ್ತು ಸೋಮವಾರ ರಾತ್ರಿ ಅರಬ್ಬೀ ಸಮುದ್ರದಲ್ಲಿ ನಡೆದ ದುರ್ಘಟನೆ ಮೀನಿನ ಬಲೆ ಮೇಲಕ್ಕೆತ್ತುವ ಸಂದರ್ಭದಲ್ಲಿ ಬೋಟ್ ಪಲ್ಟಿಯಾಗಿ ದುರಂತ ಸಂಭವಿಸಿತ್ತು.
'ಶ್ರೀ ರಕ್ಷಾ' ಎಂಬ ಹೆಸರಿನ ಬೋಟ್ನಲ್ಲಿ 25 ಮೀನುಗಾರರಿದ್ದರು. ಅವರ ಪೈಕಿ 19 ಮಂದಿ ಮೀನುಗಾರರನ್ನು ರಕ್ಷಿ ಇತರ ಬೋಟ್ ನ ಮೀನುಗಾರರು ರಕ್ಷಿಸಿದ್ದರು. 6 ಮಂದಿ ಮೀನುಗಾರರು ಬಲೆಗೆ ಸಿಲುಕಿ ನಾಪತ್ತೆಯಾಗಿದ್ದರು. (ದಿಗ್ವಿಜಯ ನ್ಯೂಸ್)