ಜಿಲ್ಲೆ

ಬೆಂಕಿ ತಗುಲಿರುವ ಹಡಗಿನಲ್ಲಿ ರಾಸಾಯನಿಕ : ಮುಂದುವರಿದ ಕಾರ್ಯಾಚರಣೆ

ಸೌಮ್ಯ ಆರ್

ಕಾಸರಗೋಡು: ಕಣ್ಣೂರಿನಿಂದ 44 ನಾಟಿಕಲ್ ಮೈಲು(81.4 ಕಿ.ಮೀ.) ದೂರದ ಆಳ ಸಮುದ್ರದಲ್ಲಿ ಬೆಂಕಿ ತಗುಲಿರುವ ಸರಕು ಸಾಗಾಟದ ‘ವಾನ್ ಹಾಯ್-503’ ಹೆಸರಿನ ಹಡಗಿನಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಒಳಗೊಂಡಿದ್ದು, ಇದಕ್ಕೆ ಬೆಂಕಿ ವ್ಯಾಪಿಸಿದಲ್ಲಿ ಪರಿಸರ ಹಾನಿಗೆ ಕಾರಣವಾಗಲಿರುವುದಾಗಿ ತಜ್ಞರು ತಿಳಿಸಿದ್ದಾರೆ.

ಹಡಗಿನ ಬೆಂಕಿ ಶಮನಗೊಳಿಸುವ ಪ್ರಯತ್ನ ಮುಂದುವರಿದಿದ್ದು, ಬೆಂಕಿ ನಂದಿಸಲು ಬಳಸುವ ನೀರು ಹಡಗಿನಲ್ಲಿರುವ ರಾಸಾಯನಿಕ ಾರ್ಮಲ್ ಡಿಹೈಡ್‌ನೊಂದಿಗೆ ಸೇರ್ಪಡೆಗೊಂಡು ಮಲಿನ ಜಲ ಸಮುದ್ರಕ್ಕೆ ಸೇರ್ಪಡೆಯಾಗುವ ಭೀತಿ ಎದುರಾಗಿದೆ. ತೈಲ, ರಾಸಾಯನಿಕ ಸಮುದ್ರಕ್ಕೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟಲು ಕರಾವಳಿ ರಕ್ಷಣಾ ಪಡೆಯ ‘ಸಮುದ್ರರ ಪ್ರಹಾರಿ’ ಎಂಬ ಹಡಗು ಕಾರ್ಯಾಚರಣೆ ಮುಂದುವರಿಸುತ್ತಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆ ಈ ಹಡಗಿನಲ್ಲಿದೆ. ಹಡಗು ಚೇತಕ್ ಹೆಲಿಕಾಫ್ಟರ್ ಹೊಂದಿದ್ದು ಇದು ಮಾಲಿನ್ಯ ಪತ್ತೆ ಹಚ್ಚಲು ಹಾಗೂ ನಿಯಂತ್ರಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ.