ಕುಂದಾಪುರ: ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮಲ್ಪೆ, ಇನ್ನರ್‌ವ್ಹೀಲ್, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಡಬ್ಲ್ಯುವಿಎಸ್ ಇಂಡಿಯಾ ಸಹಭಾಗಿತ್ವದಲ್ಲಿ ಮನೆಯಲ್ಲಿ ಸಾಕಿದ ದೇಸಿ ನಾಯಿಗಳಿಗೆ (ಬೀದಿನಾಯಿ ಹೊರತುಪಡಿಸಿ) ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕುಂದಾಪುರ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಸೆ.2ರಿಂದ 6ರ ತನಕ ನಡೆಸಲಾಗುವುದು. ಈ ಶಸ್ತ್ರಚಿಕಿತ್ಸೆ ಉಚಿತವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಹೆಸರು ನೋಂದಾಯಿಸಲು ದೂರವಾಣಿ ಸಂಖ್ಯೆ 8277390909 ಅಥವಾ 9844790531 ಸಂಪರ್ಕಿಸಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.