ಜಿಲ್ಲೆ

ತಂದೆ-ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ, ಶವಗಳನ್ನ ಕಂಡು ಬೆಚ್ಚಿಬಿದ್ದ ಸ್ಥಳೀಯರು

ಬೆಳಗಾವಿ: ರಾಮದುರ್ಗ ಪಟ್ಟಣದ ನವಿನ ಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಆಟವಾಡಿಕೊಂಡಿರಬೇಕಿದ್ದ ಪುಟ್ಟ ಮಕ್ಕಳಿಬ್ಬರು ಮಂಚದ ಮೇಲೆ ಶವವಾಗಿದ್ದರು. ಅದರ ಪಕ್ಕದಲ್ಲೇ ಕೆಳಗೆ ಹಾಸಿಗೆ ಮೇಲೆ ಈ ಮಕ್ಕಳ ತಾಯಿ ಚಿರನಿದ್ರೆಗೆ ಜಾರಿದ್ದರೆ, ನೆಲದ ಮೇಲೆ ಮಲಗಿದ್ದ ತಂದೆಯೂ ಹೆಣವಾಗಿದ್ದ. ಪತಿ-ಪತ್ನಿ ತದ್ವಿರುದ್ಧ ದಿಕ್ಕಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಇಬ್ಬರ ತಲೆಗಳು ಜೀವಕ್ಕೆ ಜೀವ ಎಂಬಂತೆ ಇದ್ದವು... ಒಂದೇ ಕುಟುಂಬ ಈ ನಾಲ್ವರ ಶವಗಳನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ಪ್ರವೀಣ ರಮೇಶ ಶೆಟ್ಟರ್(36), ಇವರ ಪತ್ನಿ ರಾಜೇಶ್ವರಿ (27), ಮಕ್ಕಳಾದ ಅಮೃತಾ (8), ಅದ್ವಿಕ್ (6) ಮೃತ ದುರ್ದೈವಿಗಳು.

ತಂದೆ-ತಾಯಿ-ಮಕ್ಕಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.