ರೈತರು ಮತ್ತು ವಿದ್ಯಾರ್ಥಿಗಳ ಸಂವಹನ ಕಾರ್ಯಕ್ರಮದಲ್ಲಿ ಫುಡ್‌ಚೈನ್ ಕ್ಯಾಂಪೈನ್ ರುವಾರಿ ಡಾ.ಸೌರೀಶ್ ಹೆಗ್ಡೆ, ಸಮಾಜ ಸೇವಕ ಅಲ್ಲಾ ಬಕ್ಷಾ, ವಿದ್ಯಾರ್ಥಿಗಳು, ಆರೋಗ್ಯ ತಜ್ಞರು ಉಪಸ್ಥಿತರಿದ್ದರು. 
ಜಿಲ್ಲೆ

ಪೌಷ್ಟಿಕ ಆಹಾರಗಳತ್ತ ಹೆಚ್ಚಿನ ಗಮನ : ಡಾ.ಸೌರೀಶ್ ಹೆಗ್ಡೆ ಹೇಳಿಕೆ

ಸೌಮ್ಯ ಆರ್

ಮಂಗಳೂರು: ವಿದ್ಯಾರ್ಥಿಗಳು ಆಹಾರ ವ್ಯವಸ್ಥೆ ಕುರಿತು ಅದರಲ್ಲಿಯೂ ಪೌಷ್ಟಿಕ ಆಹಾರಗಳ ಬಗ್ಗೆ ಹೆಚ್ಚು ಗಮನ ವಹಿಸುವ ಅವಶ್ಯಕತೆಯಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಜಂಕ್‌ಫುಡ್‌ಗಳು ಮಾನವನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಫುಡ್‌ಚೈನ್ ಕ್ಯಾಂಪೈನ್ ರುವಾರಿ ಡಾ.ಸೌರೀಶ್ ಹೆಗ್ಡೆ ಹೇಳಿದರು.

ಮಂಗಳೂರಿನ ಅಡ್ಯಾರಿನಲ್ಲಿ ಇತ್ತೀಚೆಗೆ ಫುಡ್‌ಚೈನ್ ಕ್ಯಾಂಪ್‌ನ ಅಂಗವಾಗಿ ರೈತರು ಮತ್ತು ವಿದ್ಯಾರ್ಥಿಗಳ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಹಗಲಿರುಳು ದುಡಿದು ನಮಗೆ ಆಹಾರ ನೀಡುತ್ತಿದ್ದಾರೆ. ಆದರೆ ಅದನ್ನು ಸಂಸ್ಕರಿಸಿ ಬರುತ್ತಿರುವ ಪ್ಯಾಕೆಟ್ ಆಹಾರಗಳು ನಮ್ಮ ಆರೋಗ್ಯ ಹಾಳು ಮಾಡುತ್ತಿವೆ ಎಂದರು.

ಸಮಾಜ ಸೇವಕ ಅಲ್ಲಾ ಬಕ್ಷಾ, ರೈತ ಪ್ರದೀಪ್ ಮಾತನಾಡಿದರು. ವಿದ್ಯಾರ್ಥಿಗಳು, ರೈತರು ಹಾಗೂ ಆರೋಗ್ಯ ತಜ್ಞರು ಉಪಸ್ಥಿತರಿದ್ದರು.