ಕೊಪ್ಪಳ: ಒಂದೇ ಹಗ್ಗಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಷ್ಟಗಿ ತಾಲೂಕಿನ ಜೆ.ರಾಂಪೂರ ಗ್ರಾಮದಲ್ಲಿ ನಡೆದಿದೆ.
ಕುಷ್ಟಗಿ ತಾಲೂಕು ಮಾದಾಪುರ ಗ್ರಾಮದ ನಿವಾಸಿಗಳಾದ ಹುಲಿಗೇಮ್ಮ (18) ಹಾಗೂ ವೀರುಪಾಕ್ಷಗೌಡ (20) ಮೃತರು. ಅಂತರ್ಜಾತಿ ಎಂಬ ಕಾರಣಕ್ಕೆ ಇಬ್ಬರ ಮದುವೆಗೆ ಕುಟುಂಬದ ವಿರೋಧ ವ್ಯಕ್ತವಾಗಿತ್ತು. ಪರಸ್ಪರ ತುಂಬಾ ಪ್ರೀತಿಸುತ್ತಿದ್ದ ಇಬ್ಬರು ಕುಟುಂಬದವರ ನಿರ್ಧಾರದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ತಾವರಗೇರಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)