ಕಾಸರಗೋಡು: ತ್ಯಾಜ್ಯ ನಿರ್ವಹಣೆ ಅನುಸರಣೆ ಪರಿಶೀಲನೆಗಾಗಿ ಮಂಗಲ್ಪಾಡಿಯಲ್ಲಿ ಜಿಲ್ಲಾ ವಿಜಿಲೆನ್ಸ್ ದಳದ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಫ್ಲಾಟ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆ ಖಾತ್ರಿಪಡಿಸದಿರುವುದು ಮತ್ತು ತ್ಯಾಜ್ಯವನ್ನು ಅಜಾಗರೂಕತೆಯಿಂದ ನಿರ್ವಹಿಸಿರುವುದನ್ನು ಪತ್ತೆಹಚ್ಚಿದೆ.
ಈ ರೀತಿ ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ ಫ್ಲಾೃಟ್ ಮಾಲೀಕರಿಗೆ 20,000 ರೂ.ದಂಡ ವಿಧೀಸಲಾಗಿದೆ. ಸಣ್ಣಪುಟ್ಟ ಅಪರಾಧಗಳು ಕಂಡುಬಂದ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯ ಕ್ವಾರ್ಟರ್ಸ್, ಫರ್ನಿಚರ್ ಅಂಗಡಿಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳಂತಹ ಸಂಸ್ಥೆಗಳಿಗೆ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯವನ್ನು ನಿರ್ಲಕ್ಷ್ಯದಿಂದ ಎಸೆದಿರುವುದು ಹಾಗೂ ಬೆಂಕಿ ಹಚ್ಚಿ ನಾಶಗೊಳಿಸಿರುವುದಕ್ಕೆ ದಂಡ ವಿಧಿಸಲಾಗಿದೆ. ತಪಾಸಣೆ ವೇಳೆ ಜಾರಿ ದಳದ ಮುಖಮಡ ಮುಹಮ್ಮದ್ ಮದನಿ, ಸ್ಕ್ವಾಡ್ ಸದಸ್ಯರಾದ ಎಂ.ಸನಲ್, ಇ.ಕೆ. ಫಾಜಿಲ್, ಕೆ.ರಘು, ವಿನೇಶ್ ಕುಮಾರ್ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆ ಸ್ಕ್ವಾಡ್ ತಪಾಸಣೆ ಮುಂದುವರಿಸಿದೆ.