ಜಿಲ್ಲೆ

ಸೈಕ್ಲಿಂಗ್ ಮೂಲಕ ಪರಿಸರ ಜಾಗೃತಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಪರಿಸರ ದಿನದ ಅಂಗವಾಗಿ ಬನಶಂಕರಿ 2ನೇ ಹಂತದಲ್ಲಿರುವ ಬಿಎನ್​ಎಂ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಸೈಕ್ಲಿಂಗ್ ನಡೆಸಿ ಪರಿಸರ ಜಾಗೃತಿ ಆಂದೋಲನ ನಡೆಸಲಾಯಿತು.

ವಿದ್ಯಾರ್ಥಿಗಳು 10 ಕಿ.ಮೀ. ಸೈಕ್ಲಿಂಗ್ ಮಾಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಕೂಡ ಹಸಿರು ಬಣ್ಣದ ಬಟ್ಟೆ ಧರಿಸಿ ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ನಾರಾಯಣ ರಾವ್ ಮಾನೆ ಮಾತನಾಡಿ, ಪ್ರತಿ ವರ್ಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಜಾಗೃತರಾಗುವ ಮೂಲಕ ಪರಿಸರ ಕಾಪಾಡಿ ಕೊಂಡು ನಗರವನ್ನು ಮಾಲಿನ್ಯಮುಕ್ತಗೊಳಿಸಬೇಕಿದೆ ಎಂದು ಕರೆ ನೀಡಿದರು.

ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಮಕ್ಕಳು ಪರಿಸರ ರಕ್ಷಣೆ, ನದಿ ಮೂಲಗಳು, ಕೆರೆ ಕಟ್ಟೆಗಳ ರಕ್ಷಣೆ, ಜಲಚರಗಳು, ಕಾಡು ಉಳಿಸುವ ಕೆಲಸಗಳಿಗೆ ಮುಂದಾದರೆ ಭವಿಷ್ಯದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗಲಿದೆ. ಪ್ರಸ್ತುತ ದಿನಗಳಲ್ಲಿ ವಾಹನದ ಹೊಗೆಯಿಂದ ವಾಯುಮಾಲಿನ್ಯವಾದರೆ, ಪ್ಲಾಸ್ಟಿಕ್ ಬಳಕೆಯಿಂದ ಮಣ್ಣು ಹಾಳಾಗುತ್ತಿದೆ. ನದಿ, ಕೆರೆಗಳಲ್ಲಿ ಎಸೆಯುವ ಪ್ಲಾಸ್ಟಿಕ್​ನಿಂದ ಜಲಚರಗಳ ಪ್ರಾಣ ಹಾನಿಯಾಗುತ್ತಿದೆ. ನೀರು ಮತ್ತು ಆಹಾರ ಪದಾರ್ಥಗಳಲ್ಲಿ ಪ್ಲಾಸ್ಟಿಕ್ ಸೇರುವುದ ರಿಂದ ಮನುಷ್ಯನ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಗಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.

ರಾಮಕೃಷ್ಣ ಮಠದ ಸ್ವಾಮೀಜಿಗಳು, ಬೋಧಕ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.