ಗಂಗೊಳ್ಳಿ: ಗಿಡ ನೆಟ್ಟು ಪೋಷಿಸಿ, ವನಮಹೋತ್ಸವ ಕೇವಲ ಗಿಡ ನೆಡುವ ಕಾಟಾಚಾರ ಆಗಬಾರದು. ನೀರು ವ್ಯರ್ಥ ಪೋಲು ಮಾಡದೆ ಉಳಿಸಿ, ಸಾಧ್ಯವಾದಷ್ಟು ಇಂಗಿಸಿ, ನಮಗೆ ಆಮ್ಲಜನಕ ಬೇಕು ಅದಕ್ಕೆ ಗಿಡಮರಗಳನ್ನು ಬೆಳೆಸೋಣ, ಪ್ರಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚರ್ಚ್ ಧರ್ಮಗುರು ಪಾವ್ಲ್ ರೇಗೊ ಹೇಳಿದರು.
ಕುಂದಾಪುರದ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ವಠಾರದಲ್ಲಿ ಭಾನುವಾರ ಕುಂದಾಪುರ ಕೆಥೊಲಿಕ್ ಸಭಾ ಘಟಕದಿಂದ ಪರಿಸರ ದಿನಾಚರಣೆ ಮತ್ತು ವನಮಹತ್ಸೋವಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಥೊಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಧರ್ಮಗುರುಗಳಿಗೆ ಸಾಂಕೇತಿಕವಾಗಿ ಗಿಡ ವಿತರಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ, ಪಾಲನಾ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಕೆಥೊಲಿಕ್ ಸಭಾ ಸದಸ್ಯರು ಧರ್ಮ ಕೇಂದ್ರದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಆಶಾ ಕರ್ವಾಲ್ಲೊ ವಂದಿಸಿದರು.