ಜಿಲ್ಲೆ

ಮದ್ಯಪಾನ ಮಾಡಿ ಕಾರು ಚಾಲನೆ; ಕಿಮ್ಸ್ ವೈದ್ಯನಿಂದ ಅಪಘಾತ?

Webdesk - Ravikanth

ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಲ್ಲದೆ ಬೈಕ್​ಗೆ ಡಿಕ್ಕಿ ಹೊಡೆದು ಅಪಘಾತವನ್ನೂ ಮಾಡಿರುವ ಸಂಬಂಧ ದೂರು ದಾಖಲಾಗಿದ್ದು, ಮಡಿವಾಳ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯ ಭಾರದ್ವಾಜ್ ಎಂಬವರ ವಿರುದ್ಧ ರಮೇಶ್ ಎಂಬವರು ದೂರು ನೀಡಿದ್ದಾರೆ. ಮಡಿವಾಳದ ಅಯ್ಯಪ್ಪ ದೇವಸ್ಥಾನದ ಅಂಡರ್ ಪಾಸ್ ಬಳಿ ಈ ಅಪಘಾತ ನಡೆದಿದೆ. ಆರೋಪಿ ವಿಜಯ್ ಭಾರದ್ವಾಜ್​ ಕಿಮ್ಸ್​ ವೈದ್ಯ ಎಂದು ಹೇಳಲಾಗಿದೆ.

ವಿಜಯ್ ಭಾರದ್ವಾಜ್ ಅಂಡರ್ ಪಾಸ್​ ಬಳಿ ಕಾರಿನಲ್ಲಿ ಹೋಗುತ್ತಿದ್ದು, ನಂತರ ರಿವರ್ಸ್ ಬಂದು ಬೈಕ್ ಡಿಕ್ಕಿ ಹೊಡೆದಿದ್ದಾರೆ ಎಂಬುದಾಗಿ ರಮೇಶ್ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಮದ್ಯಪಾನ ಮಾಡಿರುವುದು ತಿಳಿದುಬಂದಿದ್ದು, ಅವರನ್ನು ಕೂಡಲೇ ಮಡಿವಾಳ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ.

ವಿಜಯ್ ಮದ್ಯಪಾನ ಮಾಡಿರುವುದು ಠಾಣೆಯಲ್ಲಿ ಪರಿಶೀಲನೆ ವೇಳೆ ದೃಢಪಟ್ಟಿದ್ದು, ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ರಮೇಶ್ ದೂರು ನೀಡಿದ್ದಾರೆ.