ಬೆಂಗಳೂರು: ಪ್ರೀತಿಯಿಂದ ಸಾಕಿದ್ದ ನಾಯಿಗೆ ಸ್ನಾನ ಮಾಡಿಸಲೆಂದು ಅಣ್ಣ-ತಂಗಿ ಇಬ್ಬರೂ ಹೋಗಿದ್ದರು. ಅಲ್ಲೇ ಕುಳಿತಿದ್ದ ಜವರಾಯ ಅವರಿಬ್ಬರ ಪ್ರಾಣ ಹೊತ್ತೊಯ್ದಿದ್ದು, ತನ್ನ ಮಾಲೀಕರು ಕಾಣಿಸುತ್ತಿಲ್ಲ ಎಂದು ಆ ಮೂಕಜೀವಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು...
ಇಂತಹ ಘಟನೆ ಬೆಟ್ಟ ಹಲಸೂರಿನ ಬಳಿ ಶನಿವಾರ ಸಂಭವಿಸಿದೆ. ಇಲ್ಲಿನ ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಸಾಕುನಾಯಿಯ ಮೈತೊಳೆಯಲೆಂದು ಪ್ರೇಮ್ ಕುಮಾರ್ ಮತ್ತು ಈತನ ತಂಗಿ ಜೆನ್ನಿಫರ್ ಹೋಗಿದ್ದರು. ಇದನ್ನೂ ಓದಿರಿ ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!