ಜಿಲ್ಲೆ

ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ...

arunakunigal

ದೊಡ್ಡಬಳ್ಳಾಪುರ: ಅಮ್ಮನಿಗೆ ಹೆದರಿಸಲು ಹೋದ ಮಗಳು ದುರಂತ ಅಂತ್ಯಕಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ.

ರಾಜೀವ್ ಗಾಂಧಿ ನಗರದ ಸ್ನೇಹ (18) ಮೃತ ದುರ್ದೈವಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಗೆಳೆಯರೊಟ್ಟಿಗೆ ಫೋನ್​ನಲ್ಲೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದ ಸ್ನೇಹಾಗೆ ಆಕೆಯ ತಾಯಿ ಬೈದು ಬುದ್ಧಿ ಮಾತು ಹೇಳಿದ್ದರಂತೆ.

ಅಮ್ಮ ಬೈದಿದ್ದಕ್ಕೆ ನೊಂದುಕೊಂಡ ಸ್ನೇಹಾ, ಮಾ.3ರಂದು ಇಲಿಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ಅಮ್ಮನನ್ನು ಹೆದರಿಸಲೆಂದು ಆತ್ಮಹತ್ಯೆ ಯತ್ನ ಮಾಡಿದ್ದಂತೆ. ಆದರೆ ನಿಜವಾಗಿಯೂ ವಿಷದ ಪರಿಣಾಮ ಪ್ರಾಣಕ್ಕೆ ಕುತ್ತು ತಂದಿದೆ. ಮಗಳನ್ನು ಬದುಕಿಸಿಕೊಳ್ಳಲು ಪಾಲಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

17 ದಿನ ಜೀವನ್ಮರಣ ಹೋರಾಟ ನಡೆಸಿದ ಸ್ನೇಹಾ, ಚಿಕಿತ್ಸೆ ಫಲಿಸದೆ ಮಾ.19ರಂದು ಕೊನೆಯುಸಿರೆಳೆದಳು. ಅಯ್ಯೋ ಮಗಳೇ ನಾನು ನಿನಗೆ ಬುದ್ಧಿಮಾತು ಹೇಳಿದ್ದೇ ತಪ್ಪಾಯ್ತಾ? ಯಾಕವ್ವ ದುಡುಕಿಬಿಟ್ಟೆ ಎಂದು ಮೃತಳ ಪಾಲಕರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.