ಜಿಲ್ಲೆ

ಡಿಕೆಆರ್‌ಡಿಎಸ್ ಸಾಮರ್ಥ್ಯ ವರ್ಧನಾ ತರಬೇತಿ

ಸೌಮ್ಯ ಆರ್

ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯ ಜಿಲ್ಲಾ ಒಕ್ಕೂಟಗಳ ಮಹಿಳಾ ಸದಸ್ಯರಿಗೆ ಸಾಮರ್ಥ್ಯವರ್ಧನಾ ತರಬೇತಿ ಸಾನ್‌ತೋಮ್ ಟವರ್ ಬೆಳ್ತಂಗಡಿಯಲ್ಲಿ ನಡೆಯಿತು.

ಸ್ನೇಹಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಎಲಿಯಮ್ಮ ತೋಮಸ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಜೇಮ್ಸ್ ಮೊದಲಾದವರು ತರಬೇತಿ ನೀಡಿದರು. ನಿರ್ದೇಶಕ ಬಿನೋಯಿ ಎ.ಜೆ. ಪ್ರಸ್ತಾವಿಸಿದರು. ಮಾನಿನಿ ಮಹಿಳಾ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ಮೊದಲಾದವರಿದ್ದರು. ಕಿರಣ್ ಮಹಿಳಾ ತಾಲೂಕು ಒಕ್ಕೂಟ ಉಪಾಧ್ಯಕ್ಷ ವಲ್ಸಮ್ಮ ಎ.ಜೆ. ಸ್ವಾಗತಿಸಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಜತೆ ಕಾರ್ಯದರ್ಶಿ ಉಷಾ ವಂದಿಸಿದರು. ಸ್ನೇಹ ಜ್ಯೋತಿ ಒಕ್ಕೂಟ ಸದಸ್ಯೆ ವೈಶಾಲಿ ನಿರೂಪಿಸಿದರು.