ಯುವಜನಾಂಗ ಸಂಘಟಿತರಾಗಲು ಉತ್ಸವಗಳು ಪೂರಕ : ಹರೀಶ್ ಎಸ್.ಇಂಜಾಡಿ ಅಭಿಮತ

New Project (1)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಯುವ ಜನಾಂಗ ಒಗ್ಗಟಾಗಲು ಹಬ್ಬ ಆಚರಣೆಗಳ ಪಾತ್ರ ಅನನ್ಯ. ಧಾರ್ಮಿಕ, ಸಾಂಸ್ಕೃತಿಕ ವಿಚಾರ ಭವಿಷ್ಯದ ಪ್ರಗತಿಗೆ ಪೂರಕ. ಯುವ ಜನಾಂಗ ಸಂಘಟಿತರಾಗಲು ಉತ್ಸವಗಳು ಪೂರಕ ವಾತಾವರಣ ಸೃಷ್ಟಿ ಮಾಡುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.

ಸುಬ್ರಹ್ಮಣ್ಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ದೇವಳದ ತಾತ್ಕಾಲಿಕ ಧರ್ಮ ಸಮ್ಮೇಳನ ಮಂಟಪದಲ್ಲಿ ಮಂಗಳವಾರ 55ನೇ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ದ.ಕ ಜಿಲ್ಲಾ ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಧಾರ್ಮಿಕ ಉಪನ್ಯಾಸ ನೀಡಿ, ರಾಷ್ಟ್ರ ಭಕ್ತಿಯ ಉದ್ದೀಪನಕ್ಕೆ ಉತ್ಸವ ಅಡಿಗಲ್ಲು. ಯುವಜನಾಂಗಕ್ಕೆ ನಮ್ಮ ಆಚರಣೆ ಧಾರ್ಮಿಕ ವಿಚಾರಗಳ ಜ್ಞಾನ ನೀಡುತ್ತದೆ. ಸಹಬಾಳ್ವೆ ಬೆಳೆಯಲು ಕಾರ್ಯಕ್ರಮ ಅತ್ಯಗತ್ಯ. ಸರ್ವರ ನಡುವೆ ಸಹಕಾರದ ಪ್ರಗತಿಗೆ ಗಣೇಶೋತ್ಸವ ಅಡಿಗಲ್ಲು ಎಂದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಯಜ್ಞೇಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಎ.ವೆಂಕಟ್ರಾಜ್ ಇದ್ದರು. ಸಮಿತಿ ಉಪಾಧ್ಯಕ್ಷ ಗಿರೀಶ್ ಆಚಾರ್ಯ ಪೈಲಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ ವಂದಿಸಿದರು. ಸಂಚಾಲಕ ರಾಜೇಶ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net